ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ
ಹುಣಸೂರು: ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಿಇಟಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮತ್ತು ಸಾಧಿಸುವ ಛಲವಿರಬೇಕೆಂದು ಮೈಸೂರಿನ ಜ್ಞಾನೋದಯ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಆರ್. ನರೇಂದ್ರನ್ ಸಲಹೆ ನೀಡಿದರು.
ಪಟ್ಟಣದ ಟ್ಯಾಲೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಸಿಇಟಿ ಪರೀಕ್ಷಾರ್ಥಿಗಳಿಗೆ ಒಂದು ತಿಂಗಳ ಕಾಲ ಆಯೋಜಿಸಿರುವ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದೊಂದಿಗೆ ಪತ್ರಿಕೆಗಳನ್ನು ಓದಬೇಕು. ಸಮಯಪ್ರಜ್ಞೆ ಇರಬೇಕು, ಸಹಪಾಠಿಗಳೊಂದಿಗೆ ಗುಂಪು ಚರ್ಚೆ ಮಾಡಿ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ನಡೆಸಬೇಕೆಂದು ಹೇಳಿದರು.
ಸಿಇಟಿ ತರಬೇತುದಾರ ಪ್ರಸನ್ನ, ಟ್ಯಾಲೆಂಟ್ ಸಂಸ್ಥೆಯ ನಿರ್ದೇಶಕ ನವೀನ್ ರೈ, ಕಾಲೇಜಿನ ಪ್ರಾಂಶುಪಾಲ ರವಿ ದೀಪಕ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ನಾರಾಯಣ ರೈ, ನಿರ್ದೇಶಕ ಕೃಷ್ಣಮೂರ್ತಿ, ಮಂಜುನಾಥ್ ಇದ್ದರು. ತಾಲೂಕಿನ 150 ಮಂದಿ ವಿದ್ಯಾರ್ಥಿಗಳು ಇದ್ದರು.