ವಿಶ್ವನಾಥ್ ಮತಯಾಚನೆ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಎಚ್.ವಿಶ್ವನಾಥ್ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಚುನಾವಣಾ ಪ್ರಚಾರ ಕೈಗೊಂಡು ಮತಯಾಚಿಸಿದರು.
ನಗರ ಹೊರವಲಯದ ಹಿನಕಲ್ನಿಂದ ಚುನಾವಣಾ ಪ್ರಚಾರ ಆರಂಭಿಸಿದ ವಿಶ್ವನಾಥ್ ಅವರು ಹೂಟಗಳ್ಳಿ, ಕೂರ್ಗಳ್ಳಿ, ಬೆಳವಾಡಿ, ಹುಯಿಲಾಳು, ನಾಗವಾಲ ಮತ್ತು ಇಲವಾಲ ಗ್ರಾಮಗಳಲ್ಲಿ ಮತಯಾಚಿಸಿದರು. ಮತದಾರರಿಗೆ ಕರಪತ್ರಗಳನ್ನು ಹಂಚಿ, ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಪ್ರಚಾರ ಕಾರ್ಯಕ್ರಮದಲ್ಲಿ ಹಲವಾರು ಮುಖಂಡರು, ಕಾರ್ಯಕರ್ತರು ವಿಶ್ವನಾಥ್ ಅವರಿಗೆ ಸಾಥ್ ನೀಡಿದರು. ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ಕೆಪಿಸಿಸಿ ಸದಸ್ಯ ಕೆ. ಮರೀಗೌಡ, ಮುಖಂಡರಾದ ಕೋಟೆಹುಂಡಿ ಮಹದೇವು, ಹಿನಕಲ್ ಪ್ರಕಾಶ್, ಕೆ.ಎಸ್. ಶಿವರಾಮು, ಹಿನಕಲ್ ಉದಯ್ ಇದ್ದರು.