ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುರುಕ್ಷೇತ್ರ, ಪ್ರತಿಭೆಯ ಸೆಣಸಾಟದ ಸಮರ

Rashmi Kasaragodu
Updated On : 4 Apr 2014, 2:09 am

ಮೈಸೂರು: ವಿದ್ಯಾರ್ಥಿಗಳಿಗೆ ಕೇವಲ ತರಗತಿಯ ಪಾಠ ಪ್ರವಚನ ಮಾತ್ರವೇ ಮುಖ್ಯವಲ್ಲ, ಅದಕ್ಕೂ ಹೊರತಾಗಿಯೂ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಅತಿಮುಖ್ಯ. ಇಂತಹ ಪ್ರತಿಭಾ ಪ್ರದರ್ಶನ ಸಾರುವ ಅಂತರ ಕಾಲೇಜು ಸ್ಪರ್ಧಾ ಉತ್ಸವವು ಗುರುವಾರ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಅಧ್ಯಯನ ವಿಭಾಗದ ಆವಿಷ್ಕಾರ ವತಿಯಿಂದ ಸರಸ್ವತಿಪುರಂ ಸಂಸ್ಥೆಯ ನವಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುರುಕ್ಷೇತ್ರ ಸ್ಪರ್ಧೆಗಳ ಉತ್ಸವವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಒಕ್ಕೂಟದ ಅಧ್ಯಕ್ಷ ಆರ್.ಶಿವಕುಮಾರ್ ಉದ್ಘಾಟಿಸಿದರು.
ಆಶಯ ನುಡಿಗಳಾಡಿದ ಮೈಸೂರು ವಿವಿಯ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಕೊಟ್ರೇಶ್ವರ್, ಜಾಗತಿಕವಾಗಿ ಮಾರುಕಟ್ಟೆ ವಿಸ್ತಾರವಾಗುತ್ತಿರುವ ಇಂದಿನ ದಿನಗಳಲ್ಲಿ ಮಾರುಕಟ್ಟೆಯ ವ್ಯವಹಾರವನ್ನು ವಾಣಿಜ್ಯ ನಿರ್ವಹಣಾಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳು ಅರಿಯುವುದು ಅವಶ್ಯಕ ಎಂದರು.
ಯಾವುದೇ ಪದವಿಯಾಗಲಿ ಅದಕ್ಕೆ ಸಂಬಂಧಿಸಿದ ವಿಷಯಗಳ ಜತೆಗೆ ಕೋರ್ಸ್ಗೆ ಅಗತ್ಯವಾದ ಮಾಹಿತಿಯ ಪರಿಜ್ಞಾನವನ್ನು ವೃದ್ಧಿಸಲು ಹೆಚ್ಚಿನ ಪ್ರಾಯೋಗಿಕ ಅನುಭವ ಬೇಕು. ಇದಕ್ಕೆ ನೆರವಾಗಲು ಇಂತಹ ಉತ್ಸವಗಳು ತುಂಬ ಉಪಯುಕ್ತವಾದುದು. ಇದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜ್ಞಾನವನ್ನು ವಿಸ್ತಾರ ಮಾಡಿಕೊಳ್ಳಬೇಕು ಎಂದು ಅವರು ಆಶಿಸಿದರು.
ಜೆಎಸ್ಎಸ್ ವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಟಿ.ಡಿ ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ.ಎಚ್.ಸಿ. ಹೊನ್ನಪ್ಪ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ರೇಚಣ್ಣ ಇದ್ದರು. ಪ್ರಾಂಶುಪಾಲ ಪ್ರೊ.ಲೋಕೇಶ ಮೂರ್ತಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಶ್ವೀಜ ಹಾಗೂ ಚೇತನ ನಿರೂಪಿಸಿದರು.
ನಂತರ ಮಾನವ ಸಂಪನ್ಮೂಲ ಕುರಿತಾದ ಊರ್ಮಿ ವ್ಯೂಹ ಸ್ಪರ್ಧೆ, ಖಜಾನೆ ಭೇಟೆಯ ಗುರುಡ ವ್ಯೂಹ, ಮಾರುಕಟ್ಟೆಗೆ ಸಂಬಂಧಿಸಿದಂತೆ ವಜ್ರ ವ್ಯೂಹ, ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಚಕ್ರವ್ಯೂಹ, ವ್ಯವಹಾರದ ಚಾಕುಚಕ್ಯತೆಗೆ ಮಕರ ವ್ಯೂಹ ಹಾಗೂ ಸಮೂಹ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೇವ ವ್ಯೂಹ ಸ್ಪರ್ಧೆಗಳು ನಡೆದವು. ನಗರದ ವಿವಿಧ ಕಾಲೇಜುಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement