ಕೊಬ್ಬರಿ ಬೆಲೆ ರು. 11 ಸಾವಿರಕ್ಕೆ ಏರಿಕೆ
ಹುಳಿಯಾರು: ಪಟ್ಟಣದ ಎಪಿಎಂಸಿಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕೊಬ್ಬರಿ ಸಾರ್ವಕಾಲಿಕ ದಾಖಲೆ ಬೆಲೆ ಕ್ವಿಂಟಲ್ಗೆ ರು.11000ಕ್ಕೆ ಏರಿಕೆ ಕಂಡಿದೆ. ಕಳೆದೊಂದು ವಾರದಿಂದ ಕೊಬ್ಬರಿ ಬೆಲೆಯಲ್ಲಿ ತೀವ್ರ ಏರಿಕೆ ಕಂಡು ಬರುತ್ತಿದ್ದು ಮಂಗಳವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ರು.10000 ಹಾಗೂ ಬುಧವಾರ ತಿಪಟೂರು ಮಾರುಕಟ್ಟೆಯಲ್ಲಿ ರು.10500 ರು. ಆಗಿತ್ತು. ಆದರೆ ಗುರುವಾರ ಮಧ್ಯಾಹ್ನ ಹುಳಿಯಾರಿನ ಮಾರುಕಟ್ಟೆಯಲ್ಲಿ ಟೆಂಡರ್ ರು.11000ಕ್ಕೆ ಏರಿದೆ. ಹಾಗಿದ್ದು ಕೂಡ ಕೊಬ್ಬರಿ ಆವಕ ನಿರೀಕ್ಷಿಸಿದಷ್ಟಿಲ್ಲದೆ ಮತ್ತಷ್ಟು ಬೆಲೆ ಏರಿಕೆ ಆಗುವುದನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಇಳುವರಿ ಕುಸಿತದಿಂದ ತೆಂಗಿನಕಾಯಿ ಬೆಲೆ ಕೂಡ ಕೇಜಿಗೆ 36 ರು.ತಲುಪಿದ್ದು, ಇದೇ ಮೊದಲ ಬಾರಿಗೆ ತೆಂಗು ಹಾಗೂ ಕೊಬ್ಬರಿಯಲ್ಲಿ ಬೆಲೆ ಏರಿಕೆ ತೀವ್ರ ಗತಿಯಲ್ಲಿ ಸಾಗಿದೆ.