ಧ್ರುವ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆ
ನಂಜನಗೂಡು: ತಾಲೂಕಿನ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದ ಸಿದ್ದಿಕಿ ಅಹಮದ್ ಸಂಸದ ಆರ್. ಧ್ರುವನಾರಾಯಣ್ ಅವರನ್ನು ಬೆಂಬಲಿಸಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಸಿದ್ದಿಕಿ ಅಹಮದ್ ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಧ್ರುವನಾರಾಯಣ ಹೇಳಿದರು.
ಕಾಂಗ್ರೆಸ್ ಮುಖಂಡ ಯು.ಎನ್. ಪದ್ಮನಾಭರಾವ್ ಮಾತನಾಡಿದರು. ಎನ್.ವಿ. ತಿಮ್ಮೇಗೌಡ, ಖಲ್ಲೀಉಲ್ಲಾ, ಬ್ಲಾಕ್ ಅಧ್ಯಕ್ಷರಾದ ಸುಬ್ಬಣ್ಣ, ಮಹದೇವಪ್ಪ, ಉಪಾಧ್ಯಕ್ಷ ದೊರೆಸ್ವಾಮಿ, ಯುಸುಫ್ ಅಸ್ಗರ್, ರಮೀಜ್, ಕೃಷ್ಣಪ್ಪ, ಅಜು, ರೇಲ್ವೆ ಸಲಹಾ ಸಮಿತಿ ಸದಸ್ಯ ಗೋವಿಂದರಾಜು, ಶಿವಣ್ಣ, ನಾಗರಾಜು, ಪುರಸಭಾ ಮಾಜಿ ಅಧ್ಯಕ್ಷ ಎಂ. ಶ್ರೀಧರ್, ಸಿ.ಎಂ. ಶಂಕರ್, ಗಣೇಶ್, ಬಾಲಚಂದ್ರು, ನೂರ್ಅಹಮದ್, ಉದ್ಯಮಿ ಗಿರೀಶ್, ರವಿ, ಜಿ.ಎಂ. ವೇಣುಗೋಪಾಲ್ ಇದ್ದರು.