'ಪಂಗನಾಮ' ಶೀರ್ಷಿಕೆ ಬದಲಾವಣೆಗೆ ಆಗ್ರಹ
ಮೈಸೂರು: ಗುರು ಎಂಬವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಪಂಗನಾಮ ಎಂಬ ಹೆಸರಿಡುವ ಮೂಲಕ ವೈಷ್ಣವ ಭಕ್ತರನ್ನು ಅವಹೇಳನ ಮಾಡಿದ್ದಾರೆ. ಕೂಡಲೇ ಚಿತ್ರದ ಹೆಸರನ್ನು ಬದಲಾಯಿಸಬೇಕು ಎಂದು ಮೈಸೂರು ಜಿಲ್ಲಾ ಹಿಂದು ದೇವಾಲಯಗಳ ಅರ್ಚಕರ ಆಗಮಿಕರ ಉಪಾಧಿವಂತರ ಒಕ್ಕೂಟದವರು ಆಗ್ರಹಿಸಿದ್ದಾರೆ.
ವೈಷ್ಣವ ಪಂಥದ ಪ್ರಮುಖ ಲಾಂಛನವಾದ ನಾಮವನ್ನು ಅಸಹ್ಯವಾಗಿ, ಮೋಸದ ಲಾಂಛನವಾಗಿ ಚಿತ್ರಿಸಿದ್ದಾರೆ. ಪಂಗನಾಮ ಹೆಸರಿನಲ್ಲಿ ಕೆಳಗೆ ಯಾಮಾರಿದರೇ ಎರಡು ವೈಟು ಒಂದು ರೆಡ್ಡು ಎಂಬ ವಿಚಿತ್ರ ತಲೆಬರಹ ಬರೆದಿದ್ದಾರೆ. ಪಂಗನಾಮ ಚಿತ್ರ ನಿಷೇಧಿಸಬೇಕು. ಇಲ್ಲವೆ ಚಿತ್ರದ ಹೆಸರನ್ನು ಬದಲಾಯಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆ: ನಂತರ ಪಂಗನಾಮ ಚಿತ್ರದ ಹೆಸರು ಬದಲಾಯಿಸಲು ಆಗ್ರಹಿಸಿ ಮಹಾರಾಜ ಸಂಸ್ಕೃತ ಪಾಠಶಾಲೆ ಎದುರು ಪ್ರತಿಭಟಿಸಿದರು. ಒಕ್ಕೂಟದ ಎಚ್.ಎಸ್. ನರಸಿಂಹಮೂರ್ತಿ, ಕೆ.ರಂಗರಾಜ್, ಸಿ.ವಿ. ಪಾರ್ಥಸಾರಥಿ, ವಿಕ್ರಂ ಇದ್ದರು.