ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿಆರ್ಒ, ಎಪಿಆರ್ಒಗಳಿಗೆ ತರಬೇತಿ

Rashmi Kasaragodu
Updated On : 4 Apr 2014, 2:06 am

ಮೈಸೂರು: ವಾಣಿಜ್ಯ ತೆರಿಗೆ, ಖಜಾನೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಗುರುವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಚುನಾವಣಾ ತರಬೇತಿ ನೀಡಲಾಯಿತು.
ವಾರ್ಷಿಕ ಅಂತ್ಯದ ಲೆಕ್ಕಪತ್ರ ಪರಿಶೀಲನೆ ಕಾರ್ಯ ಇದ್ದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ, ಖಜಾನೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 125 ಮಂದಿ ಪಿಆರ್ಒ, ಎಪಿಆರ್ಒಗಳಿಗೆ ಮತಯಂತ್ರದ ಬಳಕೆ, ಮತದಾನದ ನೀತಿ ನಿಯಮ, ಚುನಾವಣಾ ಕಾರ್ಯದಲ್ಲಿ ಬಳಸುವ ಅರ್ಜಿ ನಮೂನೆಗಳು ಮತ್ತು ಇತರೆ ಪರಿಕರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.
ಮತದಾನ ನಡೆಯುವ ಕೊಠಡಿಯಲ್ಲಿ ಎಷ್ಟು ಪೇಪರ್ ಇರಬೇಕು, ಪೆನ್ನುಗಳು ಎಷ್ಟಿರಬೇಕು, ಪೆನ್ಸಿಲ್, ದಾರ, ಕಾರ್ಬನ್, ಮೇಣದಬತ್ತಿ, ಬೆಂಕಿಪಟ್ಟಿಗೆ ಮುಂತಾದ ವಸ್ತುಗಳು ಎಷ್ಟಿರಬೇಕು ಎಂಬ ಬಗ್ಗೆಯೂ ಅಧಿಕಾರಿಗಳಿಗೆ ತಿಳಿಸಲಾಯಿತು. ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಈ ತರಬೇತಿ ಶಿಬಿರದ ನೇತೃತ್ವ ವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement