ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಸವರಾಜು ಮತಯಾಚನೆ

Rashmi Kasaragodu
Updated On : 4 Apr 2014, 2:09 am

ಪಿರಿಯಾಪಟ್ಟಣ: ಪರಿಚಯವಿಲ್ಲದವರು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಅವರು ಈ ಚುನಾವಣೆಗೆ ಮಾತ್ರ ಮೀಸಲು ಎಂದು ಮಾಜಿ ಶಾಸಕ ಎಚ್.ಸಿ. ಬಸವರಾಜು ಹೇಳಿದರು. ತಾಲೂಕಿನ ಕೊಣಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್. ವಿಶ್ವನಾಥ್ ಪರವಾಗಿ ಮನೆ-ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಪರಿಚಯವಿಲ್ಲದವರ ಬಗ್ಗೆ ಜನತೆ ತಲೆ ಕೆಡಿಸಿಕೊಳ್ಳದೆ ಪರಿಚಿತ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಗೆ ಮತ ನೀಡಿ ಎಂದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ನಂತರ ನೋಡಲೂ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು. ಮುಖಂಡರಾದ ಎ.ಎಸ್. ಚನ್ನಬಸಪ್ಪ, ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಕೆ. ಹೊಲದಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪರಮೇಶ್, ಮುಖಂಡರಾದ ಸಿ.ಸಿ. ಸದಾಶಿವಪ್ಪ, ವೈ.ಎಸ್. ಸುರೇಶ್, ಪಾಲಾಕ್ಷ, ಬಾಬು, ಮೂರ್ತಿ, ನಿಂಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement