ಬೆಂಬಲಕ್ಕೆ ಬನ್ನೂರು ಕುಮಾರ್ ಮನವಿ
ಮೈಸೂರು: ಫ್ಯಾನ್ ಗುರುತಿಗೆ ಮತ ನೀಡುವಂತೆ ಮೈಸೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬನ್ನೂರು ಕುಮಾರ್ (ಕುಮಾರಸ್ವಾಮಿ) ಮನವಿ ಮಾಡಿದರು. ಜೆಡಿಎಸ್ನಲ್ಲಿ 11 ವರ್ಷ ದುಡಿದಿದ್ದೇನೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿ ತಪ್ಪು ಮಾಡಿದೆ. ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದ ಮೇಲೆ ನಾನು ತಟಸ್ಥವಾಗಿದ್ದು, ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಂಬಲಿಗರಾದ ಫೈರೋಜ್ ಪಾಷ, ರೆಹಮಾನ್ ಖಾನ್ ಮತ್ತು ವೆಂಕಟೇಶ್ ಇದ್ದರು.