ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನೆಗೆ ಬೆಂಕಿ: ಮಹಿಳೆ ಸಾವು

Rashmi Kasaragodu
Updated On : 4 Apr 2014, 2:10 am

ಮೈಸೂರು: ಹಣ ಪಡೆದು ಬಡ್ಡಿ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ದುಷ್ಕರ್ಮಿಗಳು ಮನೆಯೊಂದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಘಟನೆಯಲ್ಲಿ ಗಾಯಗೊಂಡಿದ್ದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ.
ಇದರೊಂದಿಗೆ ಈ ಪ್ರಕಣದಲ್ಲಿ ಮೃತರ ಸಂಖ್ಯೆ ಎರಡಕ್ಕೆ ಏರಿದೆ. ತಂದೆ ತಾಯಿಯನ್ನು ಕಳೆದುಕೊಂಡಿರುವ 5 ಮಕ್ಕಳು ಸಹ ಅನಾಥವಾಗಿದ್ದಾರೆ. ಉದಯಗಿರಿಯ ಕೆ.ಎನ್. ಪುರದ ನಿವಾಸಿ ಸರೀನ್ ತಾಜ್ (28) ಮೃತಪಟ್ಟವರು. ಇವರ ಪತಿ ಅಫ್ಜಲ್ ಪಾಷ ಬುಧವಾರ ಮೃತಪಟ್ಟಿದ್ದರು. ಈ ದಂಪತಿಯ ಮಕ್ಕಳಾದ ಮಹೆಫುಸ್ (9), ಯೂನಸ್ (6), ಯೂಸಫ್ (5), ಸೈಫ್ (4) ಮತ್ತು ಶೋಯೆಬ್ (3) ಎಂಬವರಿಗೂ ಸುಟ್ಟ ಗಾಯಗಳಾಗಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರೀನ್ ತಾಜ್ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಜರೀನಾ ಎಂಬವರನ್ನು ಉದಯಗಿರಿ ಠಾಣೆ ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈಗಾಗಲೇ ಹಸೀನಾ, ಜಬೀನಾ, ಆದಿಲ್, ಕೌಸರ್ ಮತ್ತು ಸೈದಾ ಎಂಬವರನ್ನು ಸಹ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement