ರೇಲ್ವೆ ಇಲಾಖೆಯಿಂದ ಆಟಿಸಂ ದಿನಾಚರಣೆ
ಮೈಸೂರು: ವಿಶ್ವ ಆಟಿಸಂ (ನ್ಯೂನ್ಯತೆ) ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಸಲುವಾಗಿ ಮೈಸೂರು ರೇಲ್ವೆ ನಿಲ್ದಾಣಕ್ಕೆ ನೀಲಿ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು.
ವಿಶ್ವಾದ್ಯಂತ ಆಟಿಸಂ ರೋಗ ನಿಯಂತ್ರಣಕ್ಕೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಅದಕ್ಕೆ ಪ್ರತಿಸ್ಪಂದನೆಯಾಗಿ ನೈಋತ್ಯ ರೇಲ್ವೆ ವಿಭಾಗವು ಕೈಜೋಡಿಸಿದ್ದು, ರೇಲ್ವೆ ನಿಲ್ದಾಣ ಹಾಗೂ ವಿಭಾಗೀಯ ರೇಲ್ವೆ ವ್ಯವಸ್ಥಾಪಕರ ಕಚೇರಿಗೆ ದೀಪಾಲಂಕಾರ ಮಾಡಲಾಗಿದೆ. ಹಲವು ಪಾರಂಪರಿಕ ಕಟ್ಟಡಗಳಲ್ಲಿ ಮೈಸೂರು ರೇಲ್ವೆ ನಿಲ್ದಾಣವು ಒಂದಾಗಿದೆ. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಆದೇಶದ ಪ್ರಕಾರ ಈ ವಿಶಿಷ್ಟಾಚರಣೆಗೆ ರೇಲ್ವೆ ಇಲಾಖೆ ಮುಂದಾಗಿದೆ.