ವಿಶ್ವನಾಥ್ಗೆ ವೀರಮಡಿವಾಳರ ಸಂಘ ಬೆಂಬಲ
ಮೈಸೂರು: ಶ್ರೀ ವೀರಮಡಿವಾಳರ ಮಹಾಜನ ಸಂಘವು ಮೈಸೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಬೆಂಬಲಿಸಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2014ರ ಬಜೆಟ್ನಲ್ಲಿ ಮಡಿವಾಳ ಜನಾಂಗಕ್ಕೆ ಲಾಂಡ್ರಿಶಾಪ್ ನಡೆಸಲು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಣ ಮೀಸಲಿಟ್ಟಿದ್ದು, ಮಡಿವಾಳ ಜನಾಂಗ ಮುಖ್ಯವಾಹಿನಿಗೆ ತರಲು ಡೋಭಿಘಾಟ್ಗಳ ಸಂಪೂರ್ಣ ಅಭಿವೃದ್ಧಿ ಮತ್ತು ಅತ್ಯಾಧುನಿಕ ವಾಷಿಂಗ್ ಮಷಿನ್ ಅಳವಡಿಸಿಕೊಳ್ಳಲು ಕಾರಣರಾಗಿದ್ದಾರೆ. ಸಂಸದ ಎಚ್.ವಿಶ್ವನಾಥ್ ಅವರು ಸಂಸದರ ನಿಧಿಯಿಂದ ಹಣ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸಂಘ ಕಾಂಗ್ರೆಸ್ ಬೆಂಬಲಿಸುವುದಾಗಿ ಸಂಘದ ಗೌರವಾಧ್ಯಕ್ಷ ಜಗದೀಶ್ಕುಮಾರ್ ತಿಳಿಸಿದ್ದಾರೆ.