ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಭೆ, ಪಾದಯಾತ್ರೆ, ಪ್ರಚಾರ

Rashmi Kasaragodu
Updated On : 4 Apr 2014, 2:07 am

ಮೈಸೂರು: ಏ.4ರ ಸಂಜೆ 6.30ಕ್ಕೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯು ಕುವೆಂಪುನಗರದ ಚಿಕ್ಕಮ್ಮನಿಕೇತನದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಅಧ್ಯಕ್ಷರ ಸಭೆ ಕರೆದಿದೆ. ಶಾಸಕ ಎಂ.ಕೆ. ಸೋಮಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ, ಸಂಸದ ಎಚ್.ವಿಶ್ವನಾಥ್, ನಗರ ಪಾಲಿಕೆ ಸದಸ್ಯರು ಮತ್ತು ಮುಖಂಡರು ಸಭೆಯಲ್ಲಿ ಭಾಗವಹಿಸುವರು.
ಮೈಸೂರು ನಗರ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಏ.4ರ ಬೆಳಗ್ಗೆ 9ಕ್ಕೆ ದೇವರಾಜ ಮೊಹಲ್ಲಾದ ಮೂರು ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸುವರು. ಪಾದಯಾತ್ರೆಯನ್ನು ಶಾಸಕ ವಾಸು ಉದ್ಘಾಟಿಸುವರು. ಖಜಾಂಚಿ ಶಿವಕುಮಾರ್, ಮುಖ್ಯ ಸಂಘಟಕ ಕೆ.ಎಸ್. ಕೃಷ್ಣಮೂರ್ತಿ, ದೇವರಾಜ ಬ್ಲಾಕ್ ಅಧ್ಯಕ್ಷ ನಾಗಭೂಷಣ್ ಭಾಗವಹಿಸುವರು. ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಏ.4ರ ಬೆಳಗ್ಗೆ 7ಕ್ಕೆ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2ನೇ ಹಂತದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಮಾಕೋಡಿನಿಂದ ಆರಂಭಿಸುವರು. ರಾವಂದೂರು, ದೊಡ್ಡಬ್ಯಾಲಾಳು, ಆರ್.ತುಂಗ, ಹಿಟ್ನೆಹೆಬ್ಬಾಗಿಲು, ಕಂಪ್ಲಾಪುರ, ಪಂಚವಳ್ಳಿ, ಮಾಲಂಗಿ, ಮುತ್ತೂರು, ಚಿಟ್ಟೇನಹಳ್ಳಿ, ಹುಣಸೆವಾಡಿ, ಬೈಲುಕುಪ್ಪೆ, ಕೊಪ್ಪದಲ್ಲಿ ಪ್ರವಾಸ ಮಾಡುವರು. ಶಾಸಕ ಕೆ.ವೆಂಕಟೇಶ್ ಭಾಗವಹಿಸುವರು ಎಂದು ನಗರ ಕಾಂಗ್ರೆಸ್ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ಎ. ವೆಂಕಟೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement