ಸಿದ್ದರಾಮಯ್ಯ ಕೈ ಬಲಪಡಿಸಲು ಮನವಿ
ಮೈಸೂರು: ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಜೈನ ಸಮುದಾಯದವರಲ್ಲಿ ಮನವಿ ಮಾಡಿದರು.
ನಗರದ ಮಹಾವೀರ ಭವನದಲ್ಲಿ ನಡೆದ ಶ್ವೇತಾಂಬರ ಜೈನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವರ ಕೈ ಬಲಪಡಿಸುವಂತೆ ಕೋರಿದರು. ಸುಮತಿನಾಥ್ ಜೈನ್ಮೂರ್ತಿ ಪೂಜಕ್ ಸಂಘದ ಅಧ್ಯಕ್ಷ ಜಾವಂತರಾಜ್ಜಿ, ಕಾರ್ಯದರ್ಶಿ ಅಶೋಕ್ಜಿ ಶಾಂತಿವಾಡಿ, ಟ್ರಸ್ಟಿಗಳಾದ ಹನ್ಸರಾಜ್ಜಿ ಪಗಾರಿಯ, ಹಿರಾಚಂದ್ಜಿ ಕಾಂಗ್ಟಾನಿ, ಕಾಂಗ್ರೆಸ್ ಮುಖಂಡ ಸಿ. ಬಸವೇಗೌಡ ಇದ್ದಾರೆ.