ಎಆರ್ಕೆ ಬಿರುಸಿನ ಪ್ರಚಾರ
ನಂಜನಗೂಡು: ಪಟ್ಟಣದ ಶ್ರೀರಾಂಪುರ, ಶಂಕರಪುರ ಸೇರಿದಂತೆ ಹಲವು ಭಾಗಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಬಿರುಸಿನ ಪ್ರಚಾರ ನಡೆಸಿದರು.
ಮುಖಂಡರಾದ ಎಸ್.ಮಹದೇವಯ್ಯ ಹಾಗೂ ಇತರೆ ಕಾರ್ಯಕರ್ತರೊಡಗೂಡಿ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ದೇಶದ ಉಜ್ವಲ ಭವಿಷ್ಯಕ್ಕೆ ಈ ಬಾರಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸುವಂತೆ, ಕಳೆದ ಮೂರು ಚುನಾವಣೆಗಳಲ್ಲೂ ಅಲ್ಪ ಮತಗಳ ಅಂತರದಿಂದ ಸೋಲುಂಡು ರಾಜಕೀಯ ಹಿನ್ನೆಲೆ ನೋವು ಅನುಭವಿಸಿದ್ದೇನೆ.
ಆದ್ದರಿಂದ ಈ ಬಾರಿ ಮತದಾರರು ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಪಾದಯಾತ್ರೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಸ್.ಮಹದೇವಯ್ಯ, ಜಿಪಂ ಸದಸ್ಯ ಡಾ. ಶಿವರಾಂ, ಬಿಜೆಪಿ ಹಿರಿಯ ಮುಖಂಡ ಎನ್.ಆರ್. ಕೃಷ್ಣಪ್ಪಗೌಡ, ಮುಖಂಡರಾದ ಎನ್.ಸಿ. ಬಸವಣ್ಣ ಕಪಿಲೇಶ್, ಪುರುಷೋತ್ತಮ, ವಿನಯ್, ಅಭಿ, ರಾಜಶೇಖರ್, ಇಲಿಯಾಸ್ ಅಹಮದ್, ಜಯರಾಂ, ಸಣ್ಣಯ್ಯ, ಪುಟ್ಟಸ್ವಾಮಿ, ಯಜಮಾನ್ ಮರಿಸ್ವಾಮಿ, ರಂಗಸ್ವಾಮಿ, ಆಕಳ ಮಹದೇವಪ್ಪ ಇದ್ದರು.