ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ಗೆ ಸೇರ್ಪಡೆ

Rashmi Kasaragodu
Updated On : 5 Apr 2014, 2:08 am

ಮೈಸೂರು: ಬಿಎಸ್ಆರ್ ಕಾಂಗ್ರೆಸ್ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಸಾಹುಕಾರ್ಹುಂಡಿ ಸಿ.ಮಹದೇವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ ಯೋಜನೆ ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿಯವರ ಸಾಲ ಮನ್ನಾ ಮಾಡಿದ್ದಾರೆ. ಅಹಿಂದ ಪರ ಹೆಚ್ಚಿನ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ ತಿಳಿಸಿದರು. ಮುಖಂಡರಾದ ಕಣಿಯನಹುಂಡಿ ಬಸವರಾಜ್, ಶ್ರೀರಾಮ್, ಟಿ.ಕೆ.ಲೇಔಟ್ ಮರಿಸ್ವಾಮಿ, ಗೋಪಾಲಪುರ ಬಸವಣ್ಣ ಇದ್ದರು.

ಬಿಕೆಸಿ ಪ್ರಚಾರ ಇಂದು
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಮಾಜಿ ಸಭಾಪತಿ ಪ್ರೊ.ಬಿ.ಕೆ. ಚಂದ್ರಶೇಖರ್, ಶಾಸಕ ಎಂ.ಕೆ. ಸೋಮಶೇಖರ್, ನಗರಾಧ್ಯಕ್ಷ ಸಿ. ದಾಸೇಗೌಡ ಮತ್ತು ಮುಖಂಡರು ಏ.5ರ ಬೆಳಗ್ಗೆ 8ಕ್ಕೆ ಚಾಮುಂಡಿಪುರಂ ವೃತ್ತದಲ್ಲಿ ಬೆಳಗ್ಗೆ 8ಕ್ಕೆ ಮತಯಾಚಿಸುವರು. ಏ.5ರ ಬೆಳಗ್ಗೆ 8.30ಕ್ಕೆ ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸುವರು. ಬಳಿಕ ಹನಗೋಡು, ದೊಡ್ಡಹೆಜ್ಜೂರು, ನೇರಳೆಕುಪ್ಪೆ, ಕರ್ಣಕುಪ್ಪೆ, ಚಿಲ್ಕುಂದ, ಕಲ್ಲಹಳ್ಳಿ, ಕೊತ್ತೇಗಾಲ, ಹರವೆ, ಕಟ್ಟೆಮಳಲವಾಡಿ, ಗಾವಡಗೆರೆ, ಮುಳ್ಳೂರು, ಬೋಳನಹಳ್ಳಿ, ಹಳೇಬೀಡು ಗ್ರಾಮಗಳಿಗೆ ಭೇಟಿ ನೀಡುವರು.



ಮಹಿಳಾ ಮೋರ್ಚಾ ಸಮಾವೇಶ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.5ರ ಬೆಳಗ್ಗೆ 11ಕ್ಕೆ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ಕೆ.ಆರ್. ಕ್ಷೇತ್ರದ ಮಹಿಳಾ ಮೋರ್ಚಾ ಸಮಾವೇಶ ನಡೆಯಲಿದ್ದು, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಶಶಿಕಲಾ ಜೊಲ್ಲೆ, ರಾಜ್ಯ ಕಾರ್ಯದರ್ಶಿ ವಿದ್ಯಾ ಅರಸ್, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಭಾಗವಹಿಸುವರು. ನಂತರ ಎನ್.ಆರ್. ಕ್ಷೇತ್ರ ಮಹಿಳಾ ಮೋರ್ಚಾ ಸಮಾವೇಶವು ಮಧ್ಯಾಹ್ನ 12.30ಕ್ಕೆ ರಾಜೇಂದ್ರನಗರದ ಕೆಇಬಿ ಛತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂ.ಎ. ಮೋಹನ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement