ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಚ್‌ಐವಿ ಮೆಡಿಸಿನ್ ಕೋರ್ಸ್‌ಗೆ ಪ್ರವೇಶ ಆರಂಭ

Rashmi Kasaragodu
Updated On : 6 Apr 2014, 1:00 am

ಮೈಸೂರು: ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ (ವಿ- ಲೀಡ್) ರಾಜೀವ್‌ಗಾಂಧಿ ಆರೋಗ್ಯ ವಿವಿಯ ಸಹಯೋಗದೊಂದಿಗೆ ಆರಂಭಿಸಿರುವ ಎಚ್‌ಐವಿ ಮೆಡಿಸಿನ್ ಕೋರ್ಸ್‌ಗೆ ಪ್ರವೇಶಾತಿ ಆರಂಭಿಸಿದೆ. ಎಂಬಿಬಿಎಸ್, ಬಿಡಿಎಸ್ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಕೋರ್ಸ್ ಮಾಡಲು ಸರ್ಕಾರ ವೇತನ ಸಹಿತ ರಜೆ ನೀಡುವ ಅವಕಾಶ ಕಲ್ಪಿಸಿದೆ. ಈ ಕೋರ್ಸ್ 1 ವರ್ಷದ್ದಾಗಿದ್ದು, ಎಚ್‌ಐವಿ ಸೇವೆಯನ್ನು ಒಳಗೊಳ್ಳುವಿಕೆ ಮತ್ತು ಸಮಗ್ರತೆ ಆಧಾರದ ಮೇಲೆ ಪ್ರಾಕ್ಟೀಸ್ ಮಾಡಬೇಕಾಗುತ್ತದೆ. ಕ್ಲಿನಿಕಲ್ ಮ್ಯಾನೇಜ್‌ಮೆಂಟ್, ಅತ್ಯಾಧುನಿಕ ವಿಧಾನ, ಸಾರ್ವಜನಿಕ ಆರೋಗ್ಯ ನಿರ್ವಹಣೆ, ತರಬೇತಿ ನಿರ್ವಹಣೆ, ಆರೋಗ್ಯ ಸಂಶೋಧನಾ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ. ಆಸಕ್ತರು ಏ.15 ರೊಳಗೆ ಪ್ರವೇಶಾತಿ ಪಡೆಯಬಹುದು. 200 ದಂಡಸಹಿತವಾಗಿ ಏ. 22 ರೊಳಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಮೊ. 89718 55114, ದೂ. 08228- 265412, 265877 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement