ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆ.ಆರ್. ಕ್ಷೇತ್ರದ ಯುವ ಕಾಂಗ್ರೆಸ್ ಸಭೆ

Rashmi Kasaragodu
Updated On : 6 Apr 2014, 1:00 am

ಮೈಸೂರು: ಕೃಷ್ಣರಾಜ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ವಾರ್ಡ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಪಕ್ಷದೆಡೆಗೆ ಯುವಜನರನ್ನು ಆಕರ್ಷಿಸಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡುವ ಅರಿವು ಮೂಡಿಸಬೇಕು. ರಾಜೀವ್‌ಗಾಂಧಿ ಜಾರಿಗೆ ತಂದ ಯೋಜನೆಗಳಿಂದ ಇಂದು ಸಾಫ್ಟ್‌ವೇರ್ ತಂತ್ರಜ್ಞಾನ, ಮೊಬೈಲ್ ಇಂಟರ್ನೆಟ್ ಬಳಸುವಂತಾಗಿದೆ ಎಂದರು. ಜೆ.ನವೀನ್‌ಕುಮಾರ್, ಕೆ.ಎನ್. ವಿನಯ್‌ಕುಮಾರ್, ಲೋಕೇಶ್, ರಾಜಗೋಪಾಲ್ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಯಿತು. ಯುವ ಘಟಕದ ಅಧ್ಯಕ್ಷ ಸಂತೋಷಕುಮಾರ್, ಮುಖಂಡರಾದ ಆರ್.ಮೂರ್ತಿ, ಸಿ.ಎಸ್.ರಘು, ಪ್ರಸನ್ನಕುಮಾರ್ ಇದ್ದರು.


ಹಲವಾರು ಅಕಾಡೆಮಿ, ಸಂಸ್ಥೆಗಳಿಂದ ತರಬೇತಿ, ಶಿಬಿರ

ಮೈಸೂರು: ಯೂನಿವರ್ಸಲ್ ಅಕಾಡೆಮಿ ವತಿಯಿಂದ ವಿಜಯನಗರದ ಸಂಜೀವಯ್ಯ ಸ್ಮಾರಕ ಪಿಯು ಕಾಲೇಜಿನಲ್ಲಿ ವಿವಿಧ ಶಾಲಾ ಮಕ್ಕಳಿಗೆ ಏ.7 ರಿಂದ ಮೇ 7 ರವರೆಗೆ ಒಂದು ತಿಂಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಪ್ರಕಾಶ್, ಮೊ. 9845051370 ಸಂಪರ್ಕಿಸಬಹುದು. ನಾಟ್ಯಾಸ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಏ.7 ರಿಂದ 27 ರವರೆಗೆ 5 ರಿಂದ 15 ವರ್ಷದ ಮಕ್ಕಳಿಗೆ ಮಕ್ಕಳ ಸೈನ್ಯ ಎಂಬ ಬೇಸಿಗೆ ಶಿಬಿರವನ್ನು ಕುವೆಂಪುನಗರದ ಅಕ್ಷಯಭಂಡಾರ್ ಬಳಿ ಸೋಲ್-ಸಾ ನೃತ್ಯ ಅಕಾಡೆಮಿಯಲ್ಲಿ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9964491957 ಸಂಪರ್ಕಿಸಿ. ಯಾದವಗಿರಿಯ ಚೇತನ ಟ್ರಸ್ಟ್ ಕಲಿಕೆಯಲ್ಲಿ ತೊಂದರೆಯುಳ್ಳ ಮಕ್ಕಳಿಗೆ ಏ.7 ರಿಂದ ಶಿಬಿರ ಏರ್ಪಡಿಸಿದೆ. ಈ ಶಿಬಿರವು ಮನೋವೈಜ್ಞಾನಿಕ ಮತ್ತು ಮಲ್ಟಿಸೆನ್ಸರಿ ಆಧಾರದ ಮೇಲೆ ಮಕ್ಕಳನ್ನು ತರಬೇತಿಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9900600151. ರಾಮವಿಲಾಸ ರಸ್ತೆಯ ಶಾಂತಲ್ಸ್ ಆರ್ಟ್ ಕ್ರಿಯೆಷನ್ಸ್ ಆಪ್ಟೆಕ್ ಹಾಗೂ ವೇದಿಕ್ ಮ್ಯಾತ್ಸ್ ಸಂಯುಕ್ತಾಶ್ರಯದಲ್ಲಿ ಏ.7 ರಿಂದ ಬೇಸಿಗೆ ಶಿಬಿರ ಆಯೋಜಿಸಿದೆ. 9845709401 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement