ಜಾತಿ ಮೀರಿ ಬಿಜೆಪಿಗೆ ಮತ ನೀಡುವಂತೆ ಮನವಿ
ಮೈಸೂರು: ದೇಶದಲ್ಲಿ ಬಲಿಷ್ಠ ನಾಯಕತ್ವ ಬೆಂಬಲಿಸುವ ಸಲುವಾಗಿ ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರಿಗೆ ಜಾತಿ ಮೀರಿ ಮತ ನೀಡುವಂತೆ ಬಿಜೆಪಿ ಮುಖಂಡ ಎಸ್. ಪ್ರಕಾಶ್ ಪ್ರಿಯದರ್ಶನ್ ಮನವಿ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರ, ಬೆಲೆ ಏರಿಕೆ, ಗಡಿ ರಕ್ಷಣೆಯಂತಹ ಮಹತ್ವದ ವಿಚಾರದಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಅಭ್ಯರ್ಥಿ ಎಚ್.ವಿಶ್ವನಾಥ್ ಕುರುಬರು ಕಾಂಗ್ರೆಸ್ಗೆ ಪೂರ್ಣ ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಕುರುಬ ಸಮಾಜದವರು ಜಾಗೃತರಾಗಿದ್ದು ಈ ಬಾರಿ ಜಾತಿ ಮೀರಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಚ್.ವಿಶ್ವನಾಥ್ ಅವರ ಶಾಸಕರಾಗಿ, ಸಂಸದರಾಗಿ ಕುರುಬ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆದ್ದರಿಂದ ಈ ಸಮಾಜದವರು ಯಾವುದೇ ಕಾರಣಕ್ಕೂ ನಿರೀಕ್ಷಿತ ಬೆಂಬಲ ನೀಡುವುದಿಲ್ಲ ಎಂದರು.