ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಹಲವೆಡೆ

Rashmi Kasaragodu
Updated On : 6 Apr 2014, 1:01 am

ಹುಣಸೂರು: ಹುಣಸೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬಾಬು ಜಗಜೀವನರಾಂ ಅವರ 107ನೇ ಜಯಂತಿ ಆಚರಿಸಲಾಯಿತು. ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಜಗಜೀವನರಾಂ ಗರೀಬಿ ಹಠಾವೋ, ಹಸಿರು ಕ್ರಾಂತಿ ನಡೆಸಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹನೀಯರನ್ನು ದಿನಂಪ್ರತಿ ನೆನೆಸುವಂತಾಗಬೇಕು ಎಂದರು. ಶಾಸಕ ಮಂಜುನಾಥ್, ಜಿಪಂ ಸದಸ್ಯರಾದ ಡಾ.ಪುಷ್ಪ ಅಮರನಾಥ್, ರಮೇಶ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಖಾಲಿದ್, ಮೈಸೂರು-ಕೊಡಗು ಜಿಲ್ಲಾ ಕಾಂಗ್ರೆಸ್ ಯುವ ಅಧ್ಯಕ್ಷ ಕುಮಾರ್, ಮಹಿಳಾ ಅಧ್ಯಕ್ಷೆ ಸಿ.ಕೆ. ನಳಿನಿ, ತಾಪಂ ಸದಸ್ಯ ರಂಗಸ್ವಾಮಿ, ಮುಖಂಡರಾದ ಮುಜೀಬ್, ರಘು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement