ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ನಿಶ್ಚಿತ

Rashmi Kasaragodu
Updated On : 6 Apr 2014, 1:01 am

ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರ ಗೆಲುವು ನಿಶ್ಚಿತ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಸಿ.ಎಸ್. ಪುಟ್ಟರಾಜು ಪರ ಮತಯಾಚಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಜನಸೇವೆ ಮಾಡುತ್ತಿರುವ ಅವರು, ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿದರೆ ರೈತರ ಸಮಸ್ಯೆಗಳಿಗೆ ಧ್ವನಿಯಾಗಲಿದ್ದಾರೆ ಎಂದು ಹೇಳಿದರು. ಪ್ರಾದೇಶಿಕ ಪಕ್ಷಗಳ ಕೈಯಲ್ಲಿ ಅಧಿಕಾರದ ಚುಕ್ಕಾಣಿ ಇದ್ದರೆ ರಾಜ್ಯದ ನೆಲ, ಜಲ, ಭಾಷೆಯ ಬಗ್ಗೆ ಹೋರಾಟ ಮಾಡಿ, ಕೇಂದ್ರ ಸರ್ಕಾರವನ್ನು ಮಣಿಸಿ ನ್ಯಾಯ ದೊರಕಿಸಬಹುದು. ಆದ್ದರಿಂದ ಮತದಾರರು ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು. ಹೊಸಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಸಚಿನ್, ಯುವ ಮುಖಂಡ ಎಚ್.ಪಿ. ಶಿವಕುಮಾರ್ ಇದ್ದರು.


ಮುಖ್ಯಮಂತ್ರಿ ಹೇಳಿಕೆಗೆ ರೈತ ಸಂಘ ಖಂಡನೆ


ಟಿ. ನರಸೀಪುರ: ಬೆಳಗಾವಿಯ ರೈತ ವಿಠಲ್ ಅರಭಾವಿ ಅವರ ಸಾವಿನ ಬಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ತೀವ್ರವಾಗಿ ಖಂಡಿಸಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹೆಸರೇಳಿಕೊಂಡೆ ರಾಜಕೀಯವಾಗಿ ಬೆಳೆವಣಿಗೆ ಕಂಡವರು. ಮುಖ್ಯಮಂತ್ರಿ ಆದ ಬಳಿಕ ರೈತರನ್ನು  ಕಡೆಗಣಿಸಿದ್ದಕ್ಕೆ ಬೆಳಗಾವಿ ಅಧಿವೇಶನದಲ್ಲಿ ಒಬ್ಬ ರೈತ ಸಾವಿಗೀಡಾಗಿದ್ದೆ ಕಾರಣ. ಹೀಗಿರುವಾಗ ರೈತನ ಆತ್ಮಹತ್ಯೆ ಬಗೆಗೆ ಹಗುರವಾಗಿ ಮಾತನಾಡಿದ್ದಾರೆ. ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದಲ್ಲಿ ಕಾಂಗ್ರೆಸ್ ವಿರುದ್ಧ ರೈತ ಸಂಘ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರಾದ ಕಳ್ಳಿಪುರ ಮಹದೇವಸ್ವಾಮಿ, ಕೆ.ಜಿ.ಶಿವಪ್ರಸಾದ್, ತಾಯೂರು ಪ್ರಕಾಶ್, ಚಿದರವಳ್ಳಿ ಮಹೇಶ್, ಚೌಡಳ್ಳಿ ಮಹದೇವಸ್ವಾಮಿ ಒತ್ತಾಯಿಸಿದ್ದಾರೆ.


ಬಿಎಸ್ಪಿ ಬೆಂಬಲಿಸಲು ಕೃಷ್ಣಮೂರ್ತಿ ಮನವಿ
ಸಾಲಿಗ್ರಾಮ: ಅಧಿಕಾರದಲ್ಲಿದ್ದಾಗ ಜನಪರ ಕೆಲಸಗಳನ್ನು ಮಾಡದೆ ಚುನಾವಣೆ ವೇಳೆ ಭರವಸೆಗಳನ್ನು ನೀಡುವ ಪಕ್ಷಗಳನ್ನು ಮತದಾರರು ತಿರಸ್ಕರಿಸಿ, ಬಿಎಸ್ಪಿಯನ್ನು ಬೆಂಬಲಿಸಬೇಕೆಂದು ಮಂಡ್ಯ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಮನವಿ ಮಾಡಿದರು. ಪಟ್ಟಣದಲ್ಲಿ ಮತಯಾಚನೆ ಮಾಡಿದ ನಂತರ ಮಾತನಾಡಿದ ರೈತರು, ದುರ್ಬಲ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು, ಸದಾ ಜನರನ್ನು ಮರಳು ಮಾಡುತ್ತಿವೆ. ದೇಶದಲ್ಲಿ ಎಲ್ಲ ವರ್ಗಗಳ ಜನತೆಯ ರಕ್ಷಣೆಗಾಗಿ ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ತತ್ವದ ಮೇಲೆ ಬಿಎಸ್ಪಿ ಹೋರಾಟ ಮಾಡುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement