ಮನೆ ಮನೆ ಬಿಜೆಪಿ ಕಾರ್ಯಕ್ರಮ ಇಂದು
ಮೈಸೂರು: ಬಿಜೆಪಿ ವತಿಯಿಂದ ಏ.6 ರಂದು ಕೃಷ್ಣರಾಜ ಕ್ಷೇತ್ರದಲ್ಲಿ ಮನೆ ಮನೆ ಬಿಜೆಪಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 6 ರಿಂದ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಶ್ರೀರಾಂಪುರ, ಅರವಿಂದನಗರ, ತರಕಾರಿ ಮಾರುಕಟ್ಟೆ, ಜ್ವಾಲಾಮುಖಿ ವೃತ್ತ, ಸಿದ್ದಾರ್ಥನಗರ, ಗೌರಿಶಂಕರನಗರ, ಚಾಮುಂಡಿಪುರಂ 1 ಮತ್ತು 2ನೇ ಮುಖ್ಯರಸ್ತೆ, ಜಯನಗರ ರಾಮಮಂದಿರ, ಬೇಡರ ಕಣ್ಣಪ್ಪ ದೇವಸ್ಥಾನ, ರಾಮಲಿಂಗೇಶ್ವರಸ್ವಾಮಿ ದೇವಸ್ಥಾನ, ಚಾಮುಂಡಿವನ, ಜೆ.ಪಿ.ನಗರ ಇ ಬ್ಲಾಕ್, ಕುವೆಂಪುನಗರ ಎಂ. ಬ್ಲಾಕ್, ಜ್ಞಾನಗಂಗಾ ಶಾಲೆ, ಹೇಮಾವತಿ ಶಾಲೆ, ಗಣೇಶ್ ಭಂಡಾರ್‌ನಲ್ಲಿ ಪ್ರಚಾರ ನಡೆಸುವರು. ಕಾಂಗ್ರೆಸ್ ಸೇವಾದಳದಿಂದ ಪಾದಯಾತ್ರೆ ನಾಳೆ: ನಗರ ಕಾಂಗ್ರೆಸ್ ಸೇವಾದಳದಿಂದ ಅಭ್ಯರ್ಥಿಯ ಪರವಾಗಿ ಏ.8ರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಕೃಷ್ಣರಾಜ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜೆಎಸ್‌ಎಸ್ ಮಠದ ಮುಂಭಾಗದಿಂದ ಆರಂಭವಾಗುವ ಪಾದಯಾತ್ರೆಗೆ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡುವರು. ಅಭ್ಯರ್ಥಿ ಎಚ್. ವಿಶ್ವನಾಥ್, ಶಾಸಕ ಎಂ.ಕೆ. ಸೋಮಶೇಖರ್, ಸಿ.ದಾಸೇಗೌಡ, ಶಿವಕುಮಾರ್ ಭಾಗವಹಿಸುವರು.