ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು ಅಭ್ಯರ್ಥಿಗಳಿಗೆ ಸಂವಾದ ಕಾರ್ಯಕ್ರಮ

Rashmi Kasaragodu
Updated On : 6 Apr 2014, 12:59 pm

ಮೈಸೂರು: ಸಮಾಜ ರಕ್ಷಣಾ ವೇದಿಕೆಯು ಮೈಸೂರು- ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಏ.9ರ ಸಂಜೆ 5ಕ್ಕೆ ಜಗನ್ಮೋಹನ ಅರಮನೆಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಈ ಬಾರಿ ಉತ್ತಮ ಅಭ್ಯರ್ಥಿಯ ಆಯ್ಕೆಗೆ ಜನರಲ್ಲಿ ಮನವಿ ಮಾಡುವ ಸಲುವಾಗಿ ಜನ ಜಾಗೃತಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಅದರ ಅಧ್ಯಕ್ಷರಾಗಿ ಮಲ್ಲಪ್ಪ, ಉಪಾಧ್ಯಕ್ಷರಾಗಿ ಎಂ. ಶ್ರೀನಿವಾಸ್ ಅವರನ್ನು ನೇಮಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಅಯೂಬ್‌ಖಾನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖಂಡರಾದ ಜಿ.ಎನ್. ದೇವದತ್ತ, ಬಚ್ಚನ್ ಇದ್ದರು.
7 ರಂದು ಸಂವಾದ: ಏ.7 ರಂದು ಸಂಜೆ 4ಕ್ಕೆ ಅರಮನೆಯ ನಗರ ಕಸಾಪ ಕಚೇರಿಯಲ್ಲಿ ವಿಕಾಲ ವಿಕಾಶ ಸಂಸ್ಥೆಯು ಅಂಗವಿಕಲರು ಮತ್ತು ಮಕ್ಕಳ ಹಕ್ಕುಗಳು ಕುರಿತು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜೊತೆ ಸಂವಾದ ಏರ್ಪಡಿಸಿದೆ ಎಂದು ಅಧ್ಯಕ್ಷ ಎಸ್.ಎಸ್. ವೈದ್ಯನಾಥ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement