ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಪಿಐ ಎಂಎಲ್‌ಗೆ ಮತ ನೀಡುವಂತೆ ಮನವಿ

Rashmi Kasaragodu
Updated On : 6 Apr 2014, 1:00 am

ಮೈಸೂರು: ಎಡಪಂಥೀಯ ಪರ್ಯಾಯಕ್ಕಾಗಿ ಸಿಪಿಐ ಎಂಎಲ್ ಪಕ್ಷದಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ನಿರ್ವಾಣಪ್ಪ ಅವರಿಗೆ ಮತ ನೀಡುವಂತೆ ಮುಖಂಡ ಚೌಡಳ್ಳಿ ಜವರಯ್ಯ ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಇಲ್ಲಿಯವರೆಗೂ ಜನವಿರೋಧಿ, ರೈತ ವಿರೋಧಿ ಆಡಳಿತ ನೀಡುತ್ತಾ ಬಂದಿರುವ ಪಕ್ಷಗಳನ್ನು ನೋಡಿ ಸಾಕಾಗಿದೆ. ನಮ್ಮ ದೇಶ ಇಂದು ಎದುರಿಸುತ್ತಿರುವ ಸಾಮ್ರಾಜ್ಯಶಾಹಿ ಆರ್ಥಿಕ ನೀತಿಗಳೆ ಕಾರಣವಾಗಿವೆ. ಬೆಲೆ ಏರಿಕೆಗೆ ಕಡಿವಾಣ ಇಲ್ಲವಾಗಿದ್ದು, ಇಂದಿನ ಜನತೆ ನಿಕೃಷ್ಟವಾಗಿ ಬದುಕುವಂತಾಗಿದೆ. ಈವರೆಗೆ 12 ಲಕ್ಷ ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮೀಣ ಭಾಗದ ದಾರಿದ್ರ್ಯ ತೊಲಗಿಲ್ಲ. ಇದೆಲ್ಲದಕ್ಕೂ ಪರಿಹಾರ ನೀಡುವ ಸಲುವಾಗಿ ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರಿದರು. ಈ ದೇಶದ ಎಲ್ಲಾ ಕ್ರಾಂತಿಕಾರಿ ಎಡ ಮತ್ತು ಪ್ರಜಾತಾಂತ್ರಿಕ ಶಕ್ತಿಗಳು ದೃಢ ಮನಸ್ಸಿನೊಂದಿಗೆ ಒಗ್ಗೂಡಿದರೆ ಮಾತ್ರ ಅಸಾಧ್ಯವಾದುದಲ್ಲ. ಇದಕ್ಕಾಗಿ ಗಂಭೀರ ಪ್ರಯತ್ನಗಳಿಗೆ ಮುಂದಾಗುವ ಅನಿವಾರ್ಯ ಹೊಣೆಗಾರಿಕೆ ಎಲ್ಲ ಎಡಪಕ್ಷಗಳ ಹೆಗಲ ಮೇಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement