ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಳೆಗನ್ನಡ ಓದುವವರ ಸಂಖ್ಯೆ ಕ್ಷೀಣ

Rashmi Kasaragodu
Updated On : 6 Apr 2014, 1:05 am

ಮೈಸೂರು: ಇಂದು ಹಳೆಗನ್ನಡ ಓದುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದು ಸಾಹಿತಿ ಡಾ.ಮಳಲಿ ವಸಂತಕುಮಾರ್  ವಿಷಾದಿಸಿದರು.
ಕರ್ನಾಟಕ ವಿಚಾರ ವೇದಿಕೆಯು ಕಲಾಮಂದಿರದ ಮನೆಯಂಗಳದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರ ಕಾವ್ಯ ಕರ್ಷಣ ವಿಮರ್ಶಾ ಲೇಖನಗಳ ಸಂಕಲನ ಹಾಗೂ ಡಾ.ಎ.ಎಚ್. ಚಂದ್ರಶೇಖರ್ ಅವರ ಆಸೆ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡದ ವಿದ್ವತ್ ಲೋಕ ಬಡವಾಗುತ್ತಿದೆ. ವಿದ್ವತ್ ಕೃತಿಗಳ ವಿಮರ್ಶೆ ಇರಲಿ, ಹಳೆಗನ್ನಡ ಓದುವವರು ಇಲ್ಲವಾಗಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 2-3 ಮಂದಿ ಮಾತ್ರ ವಿದ್ವಾಂಸರಿದ್ದಾರೆ. ಬೆಂಗಳೂರಿನ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ಇಡೀ ರಾಜ್ಯದಲ್ಲಿ 5 ಮಂದಿ ಮಾತ್ರ ಹಳೆಗನ್ನಡ ಓದುವವರು ಇದ್ದಾರೆ ಎಂದರು. ಕನ್ನಡ ಸಾಹಿತ್ಯಕ್ಕೆ ಹಳೆಗನ್ನಡ ಬೇರು ಇದ್ದಂತೆ. ಆದರೆ ಹಳೆಗನ್ನಡವನ್ನು ಪಠ್ಯವಾಗಿ ಉಳಿಸುವುದನ್ನೂ ತಪ್ಪಿಸುವ ಕೆಲಸ ನಡೆದಿದೆ. ಪ್ರಾಚೀನ ಸಾಹಿತ್ಯದ ಅರಿವು ಇಲ್ಲದಿದ್ದರೆ ಸಾಹಿತ್ಯವು ಅಂತಃಸತ್ವ ಇರಲು ಸಾಧ್ಯವಿಲ್ಲ. ಆದ್ದರಿಂದ ಪ್ರಾಚೀನ ಕನ್ನಡವನ್ನು ಹೆಚ್ಚಾಗಿ ಅಧ್ಯಯನ ಮಾಡುವಲ್ಲಿ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಡಾ.ಸಿಪಿಕೆ ಅವರ ಬರೆಹಗಳು ಕನ್ನಡಕ್ಕೆ ಬೆಳಕು ನೀಡಿವೆ. ಅವರೊಬ್ಬ ಅನುವಾದ ಚಕ್ರವರ್ತಿ. ಅವರಿಗೆ ದಾರಿದೀಪವಾದವರು ಪ್ರೊ.ದೇಜಗೌ. ಸಿಪಿಕೆಯವರ ಕಾವ್ಯ ಕರ್ಷಣ ಕೃತಿಯು ಮಹತ್ವದ ಕೃತಿ. ಕನ್ನಡ, ಇಂಗ್ಲಿಸ್, ಸಂಸ್ಕೃತ ಹಾಗೂ ಗ್ರೀಕ್ ಸಾಹಿತ್ಯ ಸೇರಿದಂತೆ ಜಗತ್ತಿನ ಸಾಹಿತ್ಯದ ಸ್ಥೂಲ ಪರಿಯಚ ಮಾಡಲಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ.ದೇಜಗೌ ಗ್ರಂಥಕರ್ತರಾದ ಡಾ.ಸಿಪಿಕೆ ಹಾಗೂ ಡಾ.ಎ.ಎಸ್. ಚಂದ್ರಶೇಖರ್ ಇದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ನಿವೃತ್ತ ಆಹಾರ ನಿರೀಕ್ಷಕ ಎಸ್. ನಾಗರಾಜೇ ಗೌಡ, ಮೈಸೂರಿನ ನಿವೃತ್ತ ಲೋಕಾಯುಕ್ತ ಶಿವಬಸಪ್ಪ ಹೊರೆಯಾಲ ಹಾಗೂ ಹಿರಿಮರಳಿ ಧರ್ಮರಾಜು ಮುಖ್ಯ ಅತಿಥಿಗಳಾಗಿದ್ದರು. ನಂತರ ಕವಿಗೋಷ್ಠಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement