ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಏಳಿಗೆ ಸಹಿಸದೇ ವೃಥಾ ಆರೋಪ

Rashmi Kasaragodu
Updated On : 7 Apr 2014, 12:47 pm

ಕೆ.ಆರ್. ನಗರ: ರಾಜಕೀಯ ಕ್ಷೇತ್ರದಲ್ಲೂ ಹೆಸರು ಗಳಿಸುತ್ತಿರುವ ಸಂಸದೆ ರಮ್ಯಾ ಅವರ ಏಳಿಗೆಯನ್ನು ಸಹಿಸದ ಶಾಸಕ ಸಾ.ರಾ. ಮಹೇಶ್ ಅವರು, ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಂಸದರಾಗಿದ್ದ ಚಲುವರಾಯಸ್ವಾಮಿ ತಾಲೂಕಿಗೆ ಭೇಟಿ ನೀಡುವುದೇ ಅಪರೂಪವಾಗಿತ್ತು. ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸಂಸದರ ನಿಧಿಯಲ್ಲಿ ಹಣ ಉಳಿಸಿ, ಭಾಷಾ ಜ್ಞಾನದ ಕೊರತೆಯಿಂದ ಸಂಸತ್‌ನಲ್ಲಿ ಭಾಗವಹಿಸಿದ್ದು ವಿರಳ ಎಂದು ಟೀಕಿಸಿದರು. ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್. ನಗರ ಕ್ಷೇತ್ರದ ಜನತೆ ರಮ್ಯಾ ಅವರಿಗೆ ಹೆಚ್ಚಿನ ಮತ ನೀಡಿದ್ದರು. ಅಂತೆಯೇ ಏ.17ರಂದು ನಡೆಯುವ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚು ಅಂತರದ ಮತ ಪಡೆಯುವ ಸಾಧ್ಯತೆ ಇರುವುದರಿಂದ, ಶಾಸಕರು ಹತಾಶರಾಗಿ ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ದೂರಿದರು.
ಜಿಪಂ ಮಾಜಿ ಸದಸ್ಯರಾದ ಶಿವರಾಂ, ಡಿ.ರವಿಶಂಕರ್, ಜಯರಾಮೇಗೌಡ, ತಾಪಂ ಮಾಜಿ ಸದಸ್ಯ ನಂಜುಂಡ, ಡೋರ್ನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಂ.ಗಿರೀಶ್, ಸದಸ್ಯರಾದ ಚನ್ನಪ್ಪಶೆಟ್ಟಿ, ರಾಮಲಿಂಗೇಗೌಡ, ಗಣೇಶ್, ರಾಘವೇಂದ್ರ, ಮಾಜಿ ಸದಸ್ಯ ಜವರೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ್, ಮುಖಂಡರಾದ ಕೆ.ಪಿ. ಜಗದೀಶ್, ವಸಂತೇಗೌಡ, ಮಹದೇವನಾಯಕ, ದೇವರಾಜು, ರವಿ, ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement