ಕೆಎಂಎಫ್ ಜಂಟಿ ನಿರ್ದೇಶಕ ಡಾ. ಕುಮಾರ್ ನಿಧನ
ಮೈಸೂರು: ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳದ ಜಂಟಿ ನಿರ್ದೇಶಕ ಡಾ.ವಿ.ವಿ. ಕುಮಾರ್ (60) ಭಾನುವಾರ ನಿಧನರಾದರು. ರಾಮಕೃಷ್ಣನಗರ ಐ ಬ್ಲಾಕ್ನಲ್ಲಿ ವಾಸವಿದ್ದ ಇವರು, ಕಳೆದ ಹಲವಾರು ವರ್ಷಗಳಿಂದ ಕೆಎಂಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಎಂಎಫ್ ತಯಾರಿಸುವ ಹಾಲಿನ ಉತ್ಪನ್ನಗಳ ಬಗ್ಗೆ ಶಾಲಾ- ಕಾಲೇಜಿನಲ್ಲಿ ಉಪನ್ಯಾಸ ನೀಡುತ್ತಿದ್ದರು. ವಿಷಯ ತಿಳಿದ ಎಂಡಿಎ ಆಯುಕ್ತ ಎಸ್.ಪಾಲಯ್ಯ, ಕೆಎಂಎಫ್ ಮುಖ್ಯಸ್ಥ ಎ.ಎಸ್. ಪ್ರೇಮ್ನಾಥ್ ಪಾರ್ಥಿವ ಶರೀರದ ದರ್ಶನ ಪಡೆದರು. ಕುಮಾರ್ ಅವರ ಅಂತ್ಯಕ್ರಿಯೆಯು ಭಾನುವಾರ ಮಧ್ಯಾಹ್ನ ಕುವೆಂಪುನಗರದ ಕಾವೇರಿ ಸ್ಕೂಲ್ ಸಮೀಪದ ರುದ್ರಭೂಮಿಯಲ್ಲಿ ನೆರವೇರಿತು.