ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಗರಹೊಳೆ ಕಾಡಿನಲ್ಲಿ ಮತ್ತೆ ಬೆಂಕಿ ಅವಘಡ

Mainashree
Updated On : 6 Apr 2014, 10:50 am

ಹುಣಸೂರು: ತಾಲೂಕಿನ ಹನಗೋಡು ಸಮೀಪದ ಶೆಟ್ಟಳ್ಳಿ- ಲಕ್ಕಪಟ್ಟಣ ಕುರುಚಲು ಕಾಡಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಮತ್ತಷ್ಟು ಕಾಡು ಬೆಂಕಿಗೆ ಆಹುತಿ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸಮೀಪದ ಶೆಟ್ಟಳ್ಳಿ- ಲಕ್ಕಪಟ್ಟಣ ಗಿರಿಜನ ಪುನರ್ವಸತಿ ಕೇಂದ್ರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಶೆಟ್ಟಳ್ಳಿ ಸಾಮಾಜಿಕ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು ನೂರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಅರಣ್ಯ ಪ್ರದೇಶದಲ್ಲಿದ್ದ ನೆಡುತೋಪು ಮರಗಳಾದ ನೀಲಗಿರಿ, ಅಕೇಶಿಯಾ, ಸುರಗಿ ಸೇರಿದಂತೆ ಇತರೆ ಕಾಡು ಜಾತಿ ಮರಗಳು ಬೆಂಕಿಯ ಜ್ವಾಲೆಗೆ ಸಿಲುಕಿ ನಾಶವಾಗಿವೆ. ದಾರಿ ಹೋಕರು ಕಾಡಿಗೆ ಬೆಂಕಿ ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆಗೆ ತಿಳಿಸಿದರು. ತಡವಾಗಿ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement