ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಸೋಲಿಸಿ, ದೇಶ ಉಳಿಸಿ

Rashmi Kasaragodu
Updated On : 7 Apr 2014, 12:46 pm

ಮೈಸೂರು: ಮೋದಿಯಿಂದ ದೇಶ ರಕ್ಷಿಸಲು ಬಿಜೆಪಿ ಸೋಲಿಸಿ, ದೇಶ ಉಳಿಸಿ ಎಂಬ ಅಭಿಯಾನವನ್ನು ಆರಂಭಿಸುತ್ತಿರುವುದಾಗಿ ಕರ್ನಾಟಕ ಜಾತ್ಯತೀತ ಒಕ್ಕೂಟದ ಮುಖಂಡ ಹಾಗೂ ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಹೇಳಿದರು.
ಮೋದಿ ಗೆಲ್ಲಿಸಿ, ಭಾರತ ಗೆಲ್ಲಿಸಿ ಎಂಬ ಹೋರಾಟವನ್ನು ಬಿಜೆಪಿ ಮಾಡುತ್ತಿದೆ. ಆದರೆ ಮೋದಿ ಸೋತರೆ ಮಾತ್ರ ಭಾರತಕ್ಕೆ ಉಳಿಗಾಲ. ಆದ್ದರಿಂದ ಬಿಜೆಪಿ ಸೋಲಿಸಿ ದೇಶ ಉಳಿಸಿ ಎಂಬ ಆಂದೋಲನ ನಾವು ಮಾಡುತ್ತಿದ್ದೇವೆ. ನರಮೇಧಕ್ಕೂ ನನಗೂ ಸಂಬಂಧವೆ ಇಲ್ಲ ಎನ್ನುವುದಾದರೆ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿರಲು ಅರ್ಹರಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ಉಂಟು ಮಾಡಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಮೈಸೂರು ಸೇರಿದಂತೆ ಹಲವೆಡೆ ಜೆಡಿಎಸ್ ಮತಗಳನ್ನು ಬಿಜೆಪಿಗೆ ಹಾಕಿಸುತ್ತಿದ್ದಾರೆ. ಮತ್ತೊಂದೆಡೆ ಎಸ್‌ಡಿಪಿಐ ಬೆಂಬಲ ಪಡೆದಿದ್ದಾರೆ. ಆ ಮೂಲಕ ಮೈಸೂರು ಭಾಗದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗದಂತೆ ಎಸ್‌ಡಿಪಿಐ ನೋಡಿಕೊಳ್ಳುತ್ತಿದೆ. ಇನ್ನು ಮಂಗಳೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸಿಲ್ಲ. ಅಲ್ಲಿನ ಜೆಡಿಎಸ್ ಮತದಾರರು ಎಸ್‌ಡಿಪಿಐ ಬೆಂಬಲಿಸದೆ ಬಿಜೆಪಿಗೆ ಮತ ನೀಡುವುದಾಗಿ ಹೇಳಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಪ್ರಭಾವ ಕಡಿಮೆ ಮಾಡುವುದೆ ದೇವೇಗೌಡರ ಪರಮಗುರಿ ಆಗಿದೆ. ಲೋಕಸಭೆಯಲ್ಲಿ ಆಡಳಿತ ನಡೆಸಲು ತಮಗೆ ಹೆಚ್ಚು ಅವಕಾಶ ಇಲ್ಲ ಎಂದು ರಾಜಿನಾಮೆ ನೀಡಿ ವಿಧಾನಸಭೆಗೆ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನ ತಪ್ಪುತ್ತಲೆ, ಲೋಕಸಭೆ ಕಡೆಗೆ ಮತ್ತೆ ವಾಲಿದ್ದಾರೆ. ಆ ಮೂಲಕ ಎನ್‌ಡಿಎ ಅಥವಾ ತೃತೀಯ ರಂಗ ಅಧಿಕಾರಕ್ಕೆ ಬಂದರೆ ಮಂತ್ರಿ ಆಗಿಯೋ ಅಥವಾ ತೃತೀಯ ರಂಗದ ಪ್ರಧಾನಿ ಆಗಿಯೋ ಅಧಿಕಾರ ನಡೆಸಬೇಕು ಎಂಬ ತಿರುಕನ ಕನಸು ಅವರು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ಊರಿನವರಿಗೆಲ್ಲ ಟೋಪಿ ಹಾಕುವ ದೇವೇಗೌಡರಿಗೆ ಜಾಫರ್ ಷರೀಫ್ ಸರಿಯಾದ ಟೋಪಿ ಹಾಕಿದರು. ಈಗ ಸಿದ್ದರಾಮಯ್ಯ ಅವರು ಉತ್ತಮ ಜನ ನಾಯಕರಾಗಿ ಬೆಳೆಯಬೇಕು. ದೇವರಾಜ ಅರಸರು ನಿಲ್ಲಿಸಿದ ಅನೇಕ ಯೋಜನೆಗಳನ್ನು ಅವರು ಮುಂದುವರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಒಕ್ಕೂಟದ ಸಂಚಾಲಕರಾದ ಮನೋಹರ್ ಮತ್ತು ಅಖಿಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement