ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿಯಿಂದ ಮನೆ ಮನೆ ಸಂಪರ್ಕ ಕಾರ್ಯಕ್ರಮ

Rashmi Kasaragodu
Updated On : 7 Apr 2014, 12:47 pm

ಹುಣಸೂರು: ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಮನೆ ಮನೆ ಸಂಪರ್ಕ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಎಲ್ಲಾ ಬೂತ್ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತಯಾಚಿಸಿದರು. ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮತನಾಡಿದ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್, 1980ರ ಏಪ್ರಿಲ್ 6 ರಂದು ಬಿಜೆಪಿ ಉಗಮಗೊಂಡಿತು. ಈ ದಿನವನ್ನು ಪಕ್ಷವು ಮಹಾಸಂಪರ್ಕ ದಿನ ಎಂದು ಘೋಷಿಸಿದ್ದು ಎಲ್ಲೆಡೆ ಮನೆ ಮನೆಗೆ ತೆರಳಿ ಮತಯಾಚಿಸಲಾಗುತ್ತಿದೆ ಎಂದರು. ಪಕ್ಷದ ಜಿಲ್ಲಾ ಖಜಾಂಚಿ ಕೆ.ಟಿ.ಗೋಪಾಲ್, ಯೋಗಾನಂದ್ ಚಂದ್ರಶೇಖರ್, ರಮೇಶ್ ಕುಮಾರ್, ಕಿರಣ್‌ಕುಮಾರ್, ಅಣ್ಣಯ್ಯನಾಯ್ಕ, ಕಮಲಮ್ಮ, ಅಕ್ಕಮ್ಮ, ವೀರೇಶರಾವ್ ಬೋಬಡೆ, ಮಹದೇವ ಹೆಗಡೆ ಮಾತನಾಡಿದರು. ಬಳಿಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಪಟ್ಟಣದಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement