ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಆಹ್ವಾನ
ಮೈಸೂರು: ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ವರಕವಿ ದ.ರಾ. ಬೇಂದ್ರೆ ನೆನಪಿನ ರಾಜ್ಯಮಟ್ಟದ ಕವನ ಸ್ಪರ್ಧೆಗಾಗಿ ಆಸಕ್ತರಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಐವರು ಹೊರ ನಾಡಿನ ಕವಿಗಳಿಗೆ ಹಾಗೂ 20 ಮಂದಿ ಕನ್ನಡ ನಾಡಿನ ಕವಿಗಳು, ಕವಯತ್ರಿಯರಿಗೆ ವರಕವಿ ಬೇಂದ್ರೆ ನೆನಪಿನ ಕಾವ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಕವನಗಳ ಪೈಕಿ ಉತ್ತಮ ಕವನಗಳನ್ನು ಆಯ್ಕೆ ಮಾಡಿ ಬೇಂದ್ರೆ ನೂರೊಂದು ನಮನ ಕೃತಿಯಲ್ಲಿ ಪ್ರಕಟಿಸಲಾಗುವುದು ಆಸಕ್ತರು ಈ ಕೆಳಕಂಡ ವಿಳಾಸಕ್ಕೆ ಏ.30 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷ ಭೇರ್ಯ ರಾಮಕುಮಾರ್ ತಿಳಿಸಿದ್ದಾರೆ.
ಸುವರ್ಣ ಕರ್ನಾಟಕ ಪ್ರಶಸ್ತಿ
ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿಗೆ ಕನ್ನಡ ನಾಡು- ನುಡಿ- ಸಂಸ್ಕೃತಿಗೆ ದುಡಿದ ಸಾಧಕರಿಂದ ಅರ್ಜಿ ಆಹ್ವಾನಿಸಿದ್ದು, ಸಾಹಿತ್ಯ ಚಿತ್ರಕಲೆ, ಜಾನಪದ, ಸಮಾಜಸೇವೆ, ರಂಗಭೂಮಿ, ಶಿಕ್ಷಣ, ಸಹಕಾರ, ಆಯುರ್ವೇದ, ವೈದ್ಯಕೀಯ, ಪರಿಸರ ಸೇವೆ, ಹೊರನಾಡಿನಲ್ಲಿ ಕನ್ನಡ ಸೇವೆ, ಪತ್ರಿಕಾರಂಗ, ಲಲಿತಕಲೆ, ಮಹಿಳಾ ಮತ್ತು ಮಕ್ಕಳ ಸೇವೆ, ಸಾಮೂಹಿಕ ನೇತ್ರದಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರು ಈ ಕೆಳಕಂಡ ವಿಳಾಸಕ್ಕೆ ಏ.20 ರೊಳಗೆ ಅರ್ಜಿ ಸಲ್ಲಿಸಬಹುದು. ಅಧ್ಯಕ್ಷರು, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅರ್ಕೇಶ್ವರ ಬಡಾವಣೆ, ಕೆ.ಆರ್. ನಗರ, ಮೈಸೂರು- 571602. ಈ ವಿಳಾಸಕ್ಕೆ ಕಳುಹಿಸಬಹುದು. ಮೊ. 94496 80583 ಸಂಪರ್ಕಿಸಬಹುದು.