ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಚಾರ ನಿಯಮ ಸುಧಾರಣೆ: ಸಲೀಂ

Rashmi Kasaragodu
Updated On : 7 Apr 2014, 12:54 pm

ಮೈಸೂರು: ನಗರದಲ್ಲಿ ಕೈಗೊಂಡ ಸಂಚಾರ ಸುಧಾರಣೆಯಿಂದ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಮೂರು ವರ್ಷಗಳ ತ್ರೈಮಾಸಿಕ ಅವಧಿಯ ಹೋಲಿಕೆ ನೀಡಿರುವ ಅವರು, 2012ರಲ್ಲಿ 17 ಪ್ರಮುಖ ಪ್ರಕರಣಗಳು, 2013ರಲ್ಲಿ 31 ಮತ್ತು 2014ರಲ್ಲಿ 24 ಪ್ರಕರಣಗಳು ದಾಖಲಾಗಿವೆ. ಪ್ರಮುಖವಲ್ಲದ ಪ್ರಕರಣಗಳು ಕ್ರಮವಾಗಿ 194, 189 ಮತ್ತು 160 ದಾಖಲಾಗಿವೆ. ಅಂತೆಯೇ ಕ್ರಮವಾಗಿ 18, 33 ಮತ್ತು 25 ಮಂದಿ ಗಾಯಗೊಂಡಿದ್ದಾರೆ. ಕ್ರಮವಾಗಿ 248, 254 ಮತ್ತು 186 ಮಂದಿ ಗಾಯಗೊಂಡಿದ್ದಾರೆ.
ಟ್ರಾಫಿಕ್ ಆಟೋಮೇಷನ್‌ನಿಂದ ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿದೆ. ಟ್ರಾಫಿಕ್ ಕೋಬ್ರಾ ಜಾರಿಯಲ್ಲಿರುವುದರಿಂದ ಅಪಘಾತ ಸ್ಥಳಕ್ಕೆ ಅತಿ ಶೀಘ್ರವಾಗಿ ತೆರಳಿ ಗಾಯಾಳುವಿಗೆ ಕೂಡಲೆ ಚಿಕಿತ್ಸೆ ದೊರೆಯುವಂತೆ ಆಗಿದೆ. ಟ್ರಾಫಿಕ್ ವಾರ್ಡನ್‌ಗಳು ಮತ್ತು ಹೋಂ ಗಾರ್ಡ್ಸ್‌ಗಳ ನಿಯೋಜನೆಯೂ ಸಂಚಾರ ನಿಯಂತ್ರಣಕ್ಕೆ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement