ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಆರ್‌ಕೆ ಪರ ಜಿಪಂ ಮಾಜಿ ಸದಸ್ಯನ ಮತಯಾಚನೆ

Mainashree
Updated On : 8 Apr 2014, 12:13 pm

ಟಿ. ನರಸೀಪುರ: ಚಾಮರಾಜನಗರ ಕ್ಷೇತ್ರದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರದು ಇದೇ ಕಡೇ ಚುನಾವಣೆಯಾದ್ದರಿಂದ ಅವರನ್ನು ಕ್ಷೇತ್ರದ ಜನತೆ ಈ ಬಾರಿ ಬೆಂಬಲಿಸಿ, ಕೈ ಹಿಡಿಯಬೇಕೆಂದು ಬಿಜೆಪಿ ಹಿರಿಯ ಮುಖಂಡ ಕರೋಹಟ್ಟಿ ಮಹದೇವಯ್ಯ ಮನವಿ ಮಾಡಿದರು.
ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರ ಮತಯಾಚಿಸಿ ಮಾತನಾಡಿದ ಅವರು, ಎರಡು ಲೋಕಸಭೆ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಸೋತರೂ ಕೃಷ್ಣಮೂರ್ತಿ ಧೃತಿಗೆಡದೆ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಜನರಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಸೋಲಿನ ಕಹಿಯನ್ನೇ ಕಂಡಿರುವ ಕೃಷ್ಣಮೂರ್ತಿ ಅವರಿಗೆ ಗೆಲುವಿನ ಸಿಹಿ ನೀಡಬೇಕು ಎಂದರು.
ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದಿಂದ ಬೇಸತ್ತಿರುವ ದೇಶದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಪುಟ್ಟಬಸವಯ್ಯ, ಕೊತ್ತೇಗಾಲ ಗ್ರಾಪಂ ಅಧ್ಯಕ್ಷ ವಿರೇಶ್, ಸದಸ್ಯ ಎಂ.ಎಂ. ಜಯಣ್ಣ, ಮುಖಂಡ ಭೃಂಗೇಶ್, ಶಂಕರ್‌ಗುರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement