ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಚಾರಕ್ಕೆ ಅವಕಾಶ ನೀಡದ ಗ್ರಾಮಸ್ಥರು

Mainashree
Updated On : 8 Apr 2014, 12:04 pm

ಹುಣಸೂರು: ಚುನಾವಣಾ ಪ್ರಚಾರಕ್ಕಾಗಮಿಸಿದ ಹಾಲಿ ಸಂಸದ ಎಚ್.ವಿಶಛ್ವನಾಥ್ ಹಾಗೂ ಶಾಸಕರ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು, ಪ್ರಚಾರ ಸಭೆ ನಡೆಸಲು ಅವಕಾಶ ನೀಡಲೇ ಇಲ್ಲ. ಪರಿಣಾಮ ಬಂದ ದಾರಿಗೆ ಸುಂಕವಿಲ್ಲದಂತೆ ಸಂಸದರು ವಾಪಸಾದ ಘಟನೆ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಗೂ ಶಾಸಕ ಎಚ್.ಪಿ. ಮಂಜುನಾಥ್ ಸಂಜೆ 7ರ ಸುಮಾರಿಗೆ ಗ್ರಾಮಕ್ಕೆ ಬಂದಾಗ, ಗ್ರಾಮದವರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಕಳೆದ ಐದು ವರ್ಷದಿಂದ ಈ ಗ್ರಾಮಕ್ಕೆ ಸಂಸದರು ಬಂದಿಲ್ಲ. ನಮ್ಮ ಕಷ್ಟ ಸುಖ ಏನೆಂದು ವಿಚಾರಿಸಿಲ್ಲ. ಈಗ ಬಂದು ವೋಟ್ ಕೇಳ್ತೀರಾ ಎಂದು ಯುವಕರ ತಂಡ ಸಂಸದರನ್ನು ಪ್ರಶ್ನಿಸಿತು. ಇನ್ನು ಮುಂದೆ ಹೀಗಾಗದಂತೆ ನಡೆದುಕೊಳ್ಳುವುದಾಗಿ ಅಭ್ಯರ್ಥಿ ವಿಶ್ವನಾಥ್ ಸಮಜಾಯಿಷಿ ನೀಡಿದರೂ ಒಪ್ಪದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಸಭೆ ನಡೆಯಬಾರದೆಂದು ಹಠ ಹಿಡಿದರು. ಕೊನೆಗೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement