ಬಿಜೆಪಿಯೇ ನಮಗೆ ಪ್ರತಿಸ್ಪರ್ಧಿ
ನಂಜನಗೂಡು: ಐದು ವರ್ಷದ ಜನ ಸೇವೆಯೇ ನನಗೆ ಶ್ರೀರಕ್ಷೆ, ನನ್ನ ಗೆಲುವು ನಿಶ್ಚಿತ. ವಿರೋಧಿಗಳು ನನ್ನನ್ನು ಸೋಲಿಸಲು ಹೊರಟಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಂಸದ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಹೇಳಿದರು. ಪಟ್ಟಣದ ಗಂಗಾಮತಸ್ಥರ ಬೀದಿ, ಮೇದರ ಬೀದಿ, ರಾಮಮಂದಿರ ರಸ್ತೆ, ನಾಯಕರ ಬೀದಿಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತಯಾಚಿಸಿದ ನಂತರ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಸಿ.ಗುರುಸ್ವಾಮಿ ಪಕ್ಷ ಬಿಡುತ್ತಿರುವವರ ಬಗ್ಗೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಚುನಾವಣೆಯಲ್ಲಿ ಬಿಜೆಪಿಯೇ ನಮಗೆ ಪ್ರತಿಸ್ಪರ್ಧಿ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ಯು.ಎನ್.ಪದ್ಮನಾಭರಾವ್, ಮಾಜಿ ಪುರಸಭಾಧ್ಯಕ್ಷ ಎಂ.ಶ್ರೀಧರ್, ಪಿ. ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಅಕ್ಬರ್, ಪುರಸಭಾ ಉಪಾಧ್ಯಕ್ಷ ದೊರೆಸ್ವಾಮಿ, ದೇವಸ್ಥಾನದ ಮಾಜಿ ಸಂಚಾಲಕ ಎನ್.ವಿ. ತಿಮ್ಮೇಗೌಡ, ಜಿ.ಎಸ್. ಗೋವಿಂದರಾಜು, ಪುರಸಭಾ ಸದಸ್ಯರಾದ ಚಂದ್ರಶೇಖರ್, ಅನುಸೂಯ ಗಣೇಶ್, ಮಾಯಣ್ಣ, ಮಲ್ಲೇಶ್, ಅಬ್ದುಲ್ ಖಾದರ್, ಬಲೀಕುಲ್ಲ, ಶೌಕತ್ ಅಲಿಖಾನ್, ಸಾದಿಕ್, ರೇಲ್ವೆ ಸಲಹಾ ಸಮಿತಿ ಸದಸ್ಯ ಶಿವಣ್ಣ, ಅಜ್ಗರ್, ಚಿದಂಬರಾರಾಧ್ಯ ಇದ್ದರು.