ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮದ್ಯ ಮಾರಾಟ ನಿಷೇಧ 16, 17ಕ್ಕೆ: ಜಿಲ್ಲಾಧಿಕಾರಿ ಸಿ. ಶಿಖಾ ಆದೇಶ

Mainashree
Updated On : 8 Apr 2014, 12:13 pm

ಮೈಸೂರು: ಲೋಕಸಭಾ ಚುನಾವಣೆ- 2014ರ ಏ.17 ರಂದು ಮತದಾನವು ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಯಲು ಏ.15ರ ಸಂಜೆ 6 ರಿಂದ ಏ.17ರ ಮಧ್ಯ ರಾತ್ರಿವರೆಗೆ ಮತ್ತು ಮೇ 16 ರಂದು ಮತ ಎಣಿಕೆ ನಡೆಯುವುದರಿಂದ ಮೇ 15ರ ಮಧ್ಯರಾತ್ರಿಯಿಂದ ಮೇ 16ರ ಮಧ್ಯರಾತ್ರಿವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಸಿ. ಶಿಖಾ ಆದೇಶಿಸಿದ್ದಾರೆ. ಮೇಲೆ ಸೂಚಿಸಿರುವ ದಿನಗಳಂದು ಪ್ರಜಾಪ್ರತಿನಿಧಿ ಕಾಯಿದೆ 1951ರ ವಿಧಿ 135ಸಿ ಪ್ರಕಾರ ಒಣ ದಿವಸಗಳೆಂದು ಘೋಷಿಸಲಾಗಿದ್ದು, ಮೈಸೂರು ನಗರ, ತಾಲೂಕು, ನಂಜನಗೂಡು, ಟಿ.ನರಸೀಪುರ, ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ತಾಲೂಕಿನಲ್ಲಿ ಮದ್ಯದಂಗಡಿಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಣೆ, ಶೇಖರಣೆ ನಿಷೇಧಿಸಲಾಗಿದೆ ಎಂದಿದ್ದಾರೆ.
ಎಚ್.ಡಿ. ಕೋಟೆ ತಾಲೂಕಿನಲ್ಲಿ ನಿಷೇಧ: ಪಕ್ಕದ ಕೇರಳ ರಾಜ್ಯ ವೈನಾಡುವಿನಲ್ಲಿ ಏ.10 ರಂದು ಚುನಾವಣೆ ನಡೆಯುವುದರಿಂದ ಎಚ್.ಡಿ. ಕೋಟೆ ತಾಲೂಕು ಗಡಿಯಂಚಿನಲ್ಲಿರುವ ಬಾವಲಿ, ಭೈರನಕುಪ್ಪೆ ಗ್ರಾಮಗಳ ವ್ಯಾಪ್ತಿಯಲ್ಲಿ ಏ.8ರ ಸಂಜೆ 6 ರಿಂದ ಏ.10ರ ಮಧ್ಯರಾತ್ರಿವರೆಗೆ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement