ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಲ್‌ಪಿಜಿ ಸಬ್ಸಿಡಿ ಹಣ ವರ್ಗ ಕುರಿತ ಸಭೆ

Mainashree
Updated On : 24 Apr 2014, 11:20 am

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 24
ಗ್ರಾಹಕರು ಬಳಸುವ ಅಡುಗೆ ಅನಿಲ ಸಬ್ಸಿಡಿ ಹಣದ ನೇರ ವರ್ಗಾವಣೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ 9 ಸದಸ್ಯರುಳ್ಳ ಸಮಿತಿ ವತಿಯಿಂದ ಬುಧವಾರ ನಗರದಲ್ಲಿ ಸಭೆ ನಡೆಸಲಾಯಿತು.
ಸಮತಿ ಮುಖ್ಯಸ್ಥ, ಭಾರತೀಯ ತಾಂತ್ರಿಕ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಎಸ್.ಜಿ. ದಂಡೆ, ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ನೀರಜ್ ಮಿತ್ತಲ್, ಎಲ್‌ಪಿಜಿ ಮುಖ್ಯಸ್ಥ ಅಲೋಕ್ ತ್ರಿಪಾಠಿ, ಎಚ್‌ಪಿಸಿಎಲ್ ಮಾಜಿ ನಿರ್ದೇಶಕ ವೈ.ಕೆ. ಅಗರವಾಲ್, ಎಲ್‌ಪಿಜಿ ಮಾಜಿ ನಿರ್ದೇಶಕ ಝಾ ಸಭೆಯಲ್ಲಿ ಭಾಗವಹಿಸಿದ್ದರು.
ಮೊದಲಿಗೆ ಎಲ್‌ಪಿಜಿ ವಿತರಕರು, ತೈಲ ಕಂಪನಿಗಳ ಪ್ರತಿನಿಧಿಗಳು, ಗ್ರಾಹಕರು, ಬ್ಯಾಂಕ್ ಮುಖ್ಯಸ್ಥರು ಮತ್ತು ಇತರರೊಂದಿಗೆ ಡಿಬಿಟಿ ಯೋಜನೆ ಬಗೆಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಇರುವ ಅಡ್ಡಿ ಆತಂಕಗಳು, ಸವಾಲುಗಳ ನಿವಾರಣೆಗೆ ಸಲಹೆ ಪಡೆಯಲಾಯಿತು.
ಇದೇ ವೇಳೆ ವಿತರಕರು ಮಾತನಾಡಿ, ಇನ್ನು ಸಾಕಷ್ಟು ಮಂದಿ ಆಧಾರ್ ಕಾರ್ಡ್ ಪಡೆಯುವಲ್ಲಿ  ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಎಲ್‌ಪಿಜಿ ಸಂಪರ್ಕ ಕಲ್ಪಿಸಲು ಸಮಸ್ಯೆಯಾಗುತ್ತಿದೆ. ಕೆಲವರು ತಪ್ಪು ಮಾಹಿತಿ ನೀಡಿರುವುದರಿಂದ ನೇರ ನಗದು ಅನ್ಯ ಖಾತೆಗಳಿಗೆ ಸೇರುತ್ತಿದೆ. ಇದರಿಂದ ರೊಚ್ಚಿಗೆದ್ದಿರುವ ಜನ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಅಮರ್‌ದೀಪ್ ಗ್ಯಾಸ್ ಏಜನ್ಸಿಯ ಮೆಹುಲ್ ಜೆ. ಪಟೇಲ್, ಲಿಟಲ್ ಗ್ಯಾಸ್ ಸರ್ವೀಸಸ್‌ನ ಕೃಷ್ಣ, ಕೆ.ಆರ್. ನಗರದ ಅಶ್ವತ್ಥ್‌ಕುಮಾರ್, ಮಾಧವರಾವ್, ಕಾಂತರಾಜ ಮತ್ತಿತರರು ಉಪಸ್ಥಿತರಿದ್ದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement