ಕಲಾ ತಪಸ್ವಿಯಾಗಿದ್ದ ಡಾ.ರಾಜ್
ಕ.ಪ್ರ.ವಾರ್ತೆ ನಂಜನಗೂಡು ಏ. 24
ಡಾ.ರಾಜ್ಕುಮಾರ್ ಕಲಾತಪಸ್ವಿ ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ನಟ, ಅವರು ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಚಿತ್ರರಂಗಕ್ಕೆ ಅವರ ಅಮೋಘ ಸೇವೆ ಇಂದಿಗೂ ಮರೆಯಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಪಟ್ಟಣದ ಗೆಳೆಯರ ಬಳಗ ಗುರುವಾರ ಏರ್ಪಡಿಸಿದ್ದ ಡಾ.ರಾಜ್ 85ನೇ ನೆನಪಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ರಾಜ್ ಮಾನವೀಯತೆಯ ಸ್ಪಂದನೆ ಮತ್ತು ಹೃದಯ ವೈಶಾಲ್ಯತೆ ಬೆಳೆಸಿಕೊಂಡಂತಹ ಮೇರು ವ್ಯಕ್ತಿ. ಕಲಾ ತಪಸ್ವಿಯಾಗಿ ಕಲೆಯನ್ನು ಆರಾಧಿಸಿದ ಏಕೈಕ ವ್ಯಕ್ತಿ. ಅವರಲ್ಲಿ ಮಾನವೀಯ ಗುಣ ಹೊಂದಿದ್ದರಿಂದ ನಮಗೆ ಇಂದಿಗೂ ಮಾದರಿ ಆಗಿದ್ದಾರೆ ಎಂದರು. ಸಮಾರಂಭದಲ್ಲಿ ಅಮೋಘ ವಾಹಿನಿಯ ಮುಖ್ಯಸ್ಥ ಬಿಳಿಗಿರಿ ರಂಗನಾಥ, ರಂಗಕರ್ಮಿ ರಾಜಶೇಖರ್ ಕದಂಬ, ಪುರಸಭಾಧ್ಯಕ್ಷೆ ಮೀನಾಕ್ಷಿ ರಾಮಚಂದ್ರು, ಉಪಾಧ್ಯಕ್ಷ ದೊರೆಸ್ವಾಮಿ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಸಮಾಜ ಸೇವಕ ಯು.ಎನ್. ಪದ್ಮನಾಭ ರಾವ್, ಮಾಜಿ ಉಪ ಮೇಯರ್ ಎಂ.ಜೆ. ರವಿಕುಮಾರ್ ಇತರರು ಇದ್ದರು.