ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ಥಳಾವಕಾಶ ನೀಡುವಲ್ಲಿ ಪಕ್ಷಪಾತ: ಆರೋಪ

Mainashree
Updated On : 24 Apr 2014, 11:20 am

ಮೈಸೂರು: ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ (ಜಿಲ್ಲಾಧಿಕಾರಿ ಕಚೇರಿ ಹಿಂಭಾಗ) ಕುತೂಹಲ ಸಂಸ್ಥೆಯ ಕಿಂದರಜೋಗಿ ಬೇಸಿಗೆ ಶಿಬಿರಕ್ಕೆ ಈ ಬಾರಿ ಸ್ಥಳಾವಕಾಶ ನೀಡುವ ವಿಚಾರದಲ್ಲಿ ಪಕ್ಷಪಾತ ಅನುಸರಿಸಲಾಗಿದೆ ಎಂದು ಕುತೂಹಲ ಸಂಸ್ಥೆ ಸಂಚಾಲಕ, ಕಿಂದರಜೋಗಿ ಶಿಬಿರ ನಿರ್ದೇಶಕ ರವೀಂದ್ರ ಜೋಶಿ ಆರೋಪಿಸಿದ್ದಾರೆ. ಕಳೆದ 3 ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಬೇಸಿಗೆ ಶಿಬಿರ ಆಯೋಜಿಸಿದ್ದೇವೆ. ಈ ಬಾರಿಯೂ ಶಿಬಿರ ಆಯೋಜಿಸಲು ವರ್ಷದಿಂದ ಜಿಲ್ಲಾಧಿಕಾರಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್  ಪದಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಆದರೆ, ನಮ್ಮ ಶಿಬಿರಕ್ಕೆ ಸ್ಥಳಾವಕಾಶ ನೀಡದೆ, ಚಿಣ್ಣರ ಲೋಕ ಎಂಬ ಬೇಸಿಗೆ ಶಿಬಿರಕ್ಕೆ ಸ್ಥಳಾವಕಾಶ ನೀಡಿದ್ದಾರೆ. ಇದರಿಂದ ನಮಗೆ ಅನ್ಯಾಯ ಆಗಿದೆ ಎಂದು ದೂರಿದರು. ಈ ಸಂಬಂಧ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಯಾರಿಗೂ ಅನುಮತಿ ನೀಡಿಲ್ಲ. ಬಂದ ಪತ್ರಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಗೆ ಭೇಟಿ ನೀಡಿದಾಗ, ದಕ್ಷಿಣ ದಿಕ್ಕಿನ ಮರದ ಬಳಿ ಶಿಬಿರ ಮಾಡಿಕೊಳ್ಳುವಂತೆ ಹೇಳುತ್ತಾರೆ. ಆ ಜಾಗದಲ್ಲಿ ಮದ್ಯದ ಬಾಟಲಿಗಳು ಸೇರಿದಂತೆ ಕಸದ ರಾಶಿ ಇದೆ. ಅದು ಶಿಬಿರಕ್ಕೆ ಸೂಕ್ತ ಜಾಗವಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement