ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮದಕರಿ ನಾಯಕ ಭಾವಚಿತ್ರಕ್ಕೆಅಪಮಾನ: ನಾಲ್ವರ ಬಂಧನ

Mainashree
Updated On : 27 Apr 2014, 12:26 pm

ಟಿ. ನರಸೀಪುರ: ಆಲಗೂಡು ಗ್ರಾಮದಲ್ಲಿ ವೀರ ಮದಕರಿ ನಾಯಕರ ಭಾವಚಿತ್ರವಿರುವ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಘಟನೆಗೆ ಸಂಬಂಧಪಟ್ಟ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಲಗೂಡು ಗ್ರಾಮದ ಲೇ. ಮಲ್ಲಣ್ಣ ಎಂಬವರ ಪುತ್ರ ಪ್ರದೀಪ, ಮಹದೇವನಾಯಕ ಎಂಬವರ ಪುತ್ರ ನಂದೀಶ್, ಮಾದಯ್ಯ ಎಂಬವರ ಪುತ್ರ ರಂಗಸ್ವಾಮಿ ಹಾಗೂ ಲೇ. ಚಂದ್ರ ಎಂಬವರ ಪುತ್ರ ಪ್ರತಾಪ್  ಬಂಧಿತ ಆರೋಪಿಗಳು. ಪಟ್ಟಣದ ಭಗವಾನ್ ವೃತ್ತದಲ್ಲಿ ನಿಂತಿದ್ದ ಪ್ರದೀಪ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ಉಳಿದ ಮೂವರ ಹೆಸರನ್ನು ತಿಳಿಸಿದ ನಂತರ, ನಂದೀಶ್ ಮನೆಯಲ್ಲಿ ಮೂವರನ್ನು ಬಂಧಿಸಲಾಯಿತು.
ಆರೋಪಿಗಳು ಕಳೆದ ಏ.19 ರಂದು ಗ್ರಾಮದಲ್ಲಿದ್ದ ವೀರ ಮದಕರಿ ನಾಯಕ ಭಾವಚಿತ್ರವಿರುವ ನಾಮಫಲಕಕ್ಕೆ ಚಪ್ಪಲಿಹಾರ ಹಾಕಿ, ಗ್ರಾಮದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಲ್ಲದೇ, ಬೇರೆ ಕೋಮಿನ ಕಡೆ ತಿರುಗಿಸುವ ಪ್ರಯತ್ನ ಮಾಡಿದ್ದರು. ಇವರ ಮೇಲೆ ಈಗಾಗಲೇ ಹಿಂದೆ ನಡೆದಿದ್ದ ಆಲಗೂಡು ಗಲಭೆ ಪ್ರಕರಣದಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಗಳು ಕೊನೆಯ ಹಂತ ತಲುಪಿದ್ದವು. ಈ ಹಿನ್ನೆಲೆ ಈ ಘಟನೆ ನಡೆದರೆ ಇದು ಗ್ರಾಮದ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಹಾದಿಯಾಗುತ್ತದೆ, ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಎರಡು ಕಡೆಯಿಂದ ರಾಜಿ ಮಾಡಿಸಿದರೆ ತಮ್ಮ ಮೇಲಿನ ಪ್ರಕರಣಗಳಿಂದ ಹೊರಬರಬಹುದು ಎಂಬ ಉದ್ದೇಶದಡಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗದ ಎಎಸ್ಪಿ ಡಾ.ಪಿ. ರಾಜಾ, ಸಿಪಿಐ ಮಹೇಶ್‌ಕುಮಾರ್, ಎಸ್‌ಐ ವಿ.ಎಸ್. ಶಶಿಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement