ತರಕಾರಿ ಉತ್ತೇಜನಕ್ಕೆ ಕ್ಲಸ್ಟರ್
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಏ. 30
ತರಕಾರಿ ಬೆಳೆ ಉತ್ತೇಜನಕ್ಕೆ ಕ್ಲಸ್ಟರ್ಗಳ ರಚನೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಲ್ಲಿ ಸಂಘಗಳ ನೋಂದಣಿ...
ಇವು ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ತೆಗೆದುಕೊಂಡಿರುವ ಕ್ರಮಗಳು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಎಂ. ನಾಗರಾಜ್ ಬುಧವಾರ 'ಕನ್ನಡಪ್ರಭ'ಕ್ಕೆ ವಿವರ ನೀಡಿದರು.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಮೈಸೂರು ತಾಲೂಕಿನ ಡಿಎಂಜಿ ಹಳ್ಳಿ, ಶೆಟ್ಟನಾಯಕನಹಳ್ಳಿ ಮರೇನಹಳ್ಳಿ, ಕಮ್ಮರಹಳ್ಳಿ, ಮಾಣಿಕ್ಯಪುರ, ಕುಮಾರಬೀಡು, ನುಗ್ಗಹಳ್ಳಿ, ಮಾದಹಳ್ಳಿ ಸೇರಿ ವಿನಾಯಕ ಬಾಳೆ ನಿಖರ ಬೇಸಾಯ ಬೆಳೆಗಾರರ ಸಂಘ ರಚಿಸಲಾಗಿದೆ. ಚನ್ನವೀರಪ್ಪ- ಅಧ್ಯಕ್ಷರು, ಟಿ.ಕೃಷ್ಣಪ್ಪ- ಉಪಾಧ್ಯಕ್ಷರು.
ವರಣ, ದಂಡಿಕೆರೆ, ಕೆಂಪೇಗೌಡನಹುಂಡಿ, ಬಡಗಲಹುಂಡಿ, ವರಕೂಡು, ಮೆಲ್ಲಹಳ್ಳಿ, ಹಾರೋಹಳ್ಳಿ, ಸಿದ್ದರಾಮನಹುಂಡಿ. ಹೊಸಹುಂಡಿ ಸೇರಿಸಿ ಚಾಮುಂಡೇಶ್ವರಿ ಹಣ್ಣು ಮತ್ತು ತರಕಾರಿ ನಿಖರ ಬೇಸಾಯ ಬೆಳೆಗಾರರ ಸಂಘ ರಚಿಸಲಾಗಿದೆ. ವಿ.ಸಿ. ನಾಗರಾಜು- ಅಧ್ಯಕ್ಷರು, ಸೋಮಶೇಖರ್- ಉಪಾಧ್ಯಕ್ಷರು. ಎಚ್.ಡಿ. ಕೋಟೆ ತಾಲೂಕು ದಡದಹಳ್ಳಿ, ಕಲ್ಲಂಬಾಳು, ಚಾಮಲಾಪುರ, ಮುಳ್ಳೂರು, ಕಟ್ಟೆಹುಣಸೂರು, ಹಲಸೂರು, ಪುರದಕಟ್ಟೆ, ಕೊಡಸೀಗೆ ಸೇರಿಸಿ ಲಕ್ಷ್ಮೀಕಾಂತಸ್ವಾಮಿ ಬಾಳೆ ಬೆಳೆಗಾರರ ಸಂಘ ರಚಿಸಲಾಗಿದೆ. ಎಸ್.ಬಿ. ನಾಗರಾಜು- ಅಧ್ಯಕ್ಷರು, ಸಿದ್ದಪ್ಪ- ಉಪಾಧ್ಯಕ್ಷರು. ಪುರ, ಅತ್ತಿವಾಳು, ಅವರೆಗೆರೆ ಸೇರಿಸಿ ಬಸವೇಶ್ವರ ತರಕಾರಿ ಬೆಳೆಗಾರರ ಸಂಘ ರಚಿಸಲಾಗಿದೆ. ಪಿ.ಮಹದೇವಪ್ಪ- ಅಧ್ಯಕ್ಷರು, ರಾಮಣ್ಣ- ಉಪಾಧ್ಯಕ್ಷರು. ಹುಣಸೂರು ತಾಲೂಕು ಅತ್ತಿಗುಪ್ಪೆ, ಹುಲ್ಯಾಳು, ಹೆಜ್ಜೊಡ್ಲು, ಮುಳ್ಳೂರು ಸೇರಿಸಿ ಬಸವೇಶ್ವರ ತೋಟಗಾರಿಕೆ ಬೆಳೆಗಾರರ ಸಂಘ (ಪಪ್ಪಾಯ) ರಚಿಸಲಾಗಿದೆ. ಎಂ.ಸಂಜಯ್- ಅಧ್ಯಕ್ಷರು, ಬಿ.ಪಿ. ಮಹೇಶ್- ಉಪಾಧ್ಯಕ್ಷರು. ಹನುಮಂತಪುರ, ಕುಟ್ಟವಾಡಿ, ಮಯೂರಪುರ, ಕಾಡುವಡ್ಡರಗುಡಿ, ದೇವಲಾಪುರ ಸೇರಿಸಿ, ಕೆಂಡಗಣ್ಣೇಶ್ವರ ತೋಟಗಾರಿಕೆ ಬೆಳೆಗಾರರ ಸಂಘ (ಬಾಳೆ) ರಚಿಸಲಾಗಿದೆ. ಕೆ.ಆರ್. ನಗರ ತಾಲೂಕು ಹಳೇ ಮಿರ್ಲೆಯಲ್ಲಿ ಹುಣಸಮ್ಮ ಕೋಕೋ ಬೆಳೆಗಾರರ ಸಂಘ ರಚಿಸಲಾಗಿದ್ದು, ಸುನಯ್ಗೌಡ- ಅಧ್ಯಕ್ಷರು.
ಗಂಧನಹಳ್ಳಿಯಲ್ಲಿ ಕಾವೇರಿ ಬಾಳೆ ಬೆಳೆಗಾರರ ಸಂಘ ರಚಿಸಲಾಗಿದೆ. ನಂಜನಗೂಡು ತಾಲೂಕು ಕಾರ್ಯ, ಮಾದಾಪುರ, ಚಾಮನಮಾದನಹಳ್ಳಿ, ಕಗ್ಗಲೂರು, ದುಗ್ಗಹಳ್ಳಿ, ಕುರಿಹುಂಡಿ, ಮಾಲಹಳ್ಳಿ, ತರಗನಹಳ್ಳಿ, ಕಟ್ಟೆಹಳ್ಳಿ, ಹುಲ್ಲಹಳ್ಳಿ, ಶಿರಮಳ್ಳಿ ಸೇರಿಸಿ, ಶ್ರೀ ನಂದಿಮಹದೇಶ್ವರ ಬಾಳೆ ಬೆಳೆಗಾರರ ಸಂಘ ರಚಿಸಲಾಗಿದ್ದು, ಎಸ್. ಷಡಕ್ಷರಿ- ಅಧ್ಯಕ್ಷರು, ಡಿ.ಕೆ.ರಾಜಪ್ಪ- ಉಪಾಧ್ಯಕ್ಷರು.
ಬಸವೇಶ್ವರ ಸಂಘ: ತಾಯೂರು, ವಡ್ಡರಹುಂಡಿ, ಕೊಟ್ರಯ್ಯನಹುಂಡಿ, ಕಲ್ಕುಂದ, ಮಲ್ಲೂಪುರ, ಕಿರಗುಂದ, ಬೀರಿಹುಂಡಿ, ಈಶ್ವರಗೌಡನಹಳ್ಳಿ, ಚಿನ್ನಂಬಳ್ಳಿ ಸೇರಿಸಿ, ಬಸವೇಶ್ವರ ತರಕಾರಿ ಬೆಳೆಗಾರರ ಸಂಘ ರಚಿಸಲಾಗಿದ್ದು, ಮಹದೇವಪ್ಪ- ಅಧ್ಯಕ್ಷರು. ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು, ವಿ.ಜಿ. ಕೊಪ್ಪಲು, ಬಸಲಾಪುರ, ಕಂಪಲಾಪುರಂ, ಆರ್. ಹೊಸಹಳ್ಳಿ ಸೇರಿಸಿ, ಶ್ರೀ ವಿಘ್ನೇಶ್ವರ ಬಾಳೆ ಬೆಳೆಗಾರರ ಸಂಘ ರಚಿಸಲಾಗಿದ್ದು, ಮಹೇಶ್ ಅರಸ್- ಅಧ್ಯಕ್ಷರು.
ಚಪ್ಪರಹಳ್ಳಿ, ಅಂಬಲಾರೆ, ಹಾರನಹಳ್ಳಿ, ಪಿ.ಕೆ. ಕೊಪ್ಪಸು, ಹುಣಸೆಕೊಪ್ಪಲು ಸೇರಿಸಿ ಶ್ರೀ ಕೊಳ್ಳಿ ಮಲ್ಲಿಕಾರ್ಜುಸ್ವಾಮಿ ಬಾಳೆ ಬೆಳೆಗಾರರ ಸಂಘ ರಚಿಸಲಾಗಿದ್ದು, ಸಿ.ಕೆ. ಪ್ರಕಾಶ್- ಅಧ್ಯಕ್ಷರು, ನಾಗೇಂದ್ರ- ಉಪಾಧ್ಯಕ್ಷರು. ಟಿ.ನರಸೀಪುರ ತಾಲೂಕು ತುಂಬಲ. ಕುಪ್ಯಾ, ಹೆಚ್ಚುವಳ್ಳಿ, ಬೊಮ್ಮನಾಯಕನಹಳ್ಳಿ, ಮುತ್ತತ್ತಿ ಸೇರಿಸಿ ಶ್ರೀ ರಾಮ ಬಾಳೆ ಬೆಳೆಗಾರರ ಸಂಘ ರಚಿಸಿದ್ದು, ಎಂ.ಮಹದೇವಯ್ಯ- ಅಧ್ಯಕ್ಷರು. ಬಿ.ಸೀಹಳ್ಳಿ, ಮಾರಸಮಚನಹಳ್ಳಿ, ಹನುಮನಾಳು, ಮಾದಿಗಹಳ್ಳಿ, ಭುಗತಹಳ್ಳಿ ಸೇರಿಸಿ, ಶ್ರೀ ಮಹಾಲಿಂಗೇಶ್ವರ ತರಕಾರಿ ಬೆಳೆಗಾರರ ಸಂಘ ರಚಿಸಲಾಗಿದ್ದು, ನಿಂಗೇಗೌಡ- ಅಧ್ಯಕ್ಷರು.