ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಸದರಲ್ಲಿ ಸಮಸ್ಯೆಗೆ ಸ್ಪಂದಿಸುವ ಗುಣ

Rashmi Kasaragodu
Updated On : 2 Aug 2014, 12:21 pm

ಟಿ. ನರಸೀಪುರ: ಸಾಮಾನ್ಯ ಜನರಿಗೂ ಸ್ಪಂದಿಸುವ ಗುಣದಿಂದಲೇ ಸಂಸದ ಆರ್.ಧ್ರುವನಾರಾಯಣ ಅವರು ಉತ್ತಮ ರಾಜಕಾರಣಿಯಾಗಿದ್ದಾರೆ ಎಂದು ವರುಣ ಯುವ ಕಾಂಗ್ರೆಸ್ ಅಧ್ಯಕ್ಷ ಅಮ್ಜದ್ ಖಾನ್ ಹೇಳಿದರು.
ಪಟ್ಟಣದ ಬ್ಲೆಸ್ಸಡ್ ಅನಾಥಾಲಯದಲ್ಲಿ ಸಂಸದ ಆರ್. ಧ್ರುವನಾರಾಯಣ ಅವರ 54ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ವಾಟರ್ ಕ್ಯಾನ್ ವಿತರಿಸಿ ಮಾತನಾಡಿದ ಅವರು, ಎರಡು ಭಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಸಂಸದರಾಗಿ ಪ್ರತಿನಿಧಿಸುವ ಮೂಲಕ ಹಳ್ಳಿಗಾಡಿನ ಜನರು ಮೆಚ್ಚುವ ಧ್ರುವತಾರೆಯಾಗಿದ್ದಾರೆ. ಮೋದಿ ಅಲೆಯ ನಡುವೆಯೂ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಬದ್ಧತೆ ತೋರಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರು.
ಪಪಂ ಸದಸ್ಯ ಸಿ. ಉಮೇಶ್, ಭೈರಾಪುರ ಗ್ರಾಪಂ ಸದಸ್ಯ ಮೆಡಿಕಲ್ ಪ್ರಕಾಶ್, ಮುಖಂಡರಾದ ಹಾಲಿನ ಸತ್ಯ, ಶಿವಶಂಕರ, ಮಹಮದ್ ಹುಸೇನ್, ಗರ್ಗೇಶ್ವರಿ ನವೀದ್, ಮಠದ ಸಿದ್ದರಾಜು, ಬ್ಲೆಸ್ಸಡ್ ಅನಾಥಾಲಯದ ಲಿಂಗರಾಜು, ದಸಂಸ ತಾಲೂಕು ಸಂಚಾಲಕ ಬನ್ನಳ್ಳಿ ಸೋಮಣ್ಣ, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement