ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಕ್ಷರ ದಾಸೋಹಕ್ಕೆ ಚಾಲನೆ

Rashmi Kasaragodu
Updated On : 5 Aug 2014, 12:15 pm

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ದಿಡ್ಡಿಯಮ್ಮ ಸಂಸ್ಥೆ ಆವರಣದಲ್ಲಿ ಅಕ್ಷರ ದಾಸೋಹಕ್ಕೆ ಸಂಸ್ಥೆಯ ವ್ಯವಸ್ಥಾಪಕ ಲಕ್ಷ್ಮಣೇಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಮ್ಮ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೆ ಹೆಚ್ಚಾಗಿದ್ದಾರೆ. ಹಳ್ಳಿಗಾಡಿನ ಬಡ ಕುಟುಂಬದ ಮಕ್ಕಳಿಗೆ ತುಂಬಾ ಅನುಕೂಲವಾಗಿದ್ದು, ಬಿಸಿ ಊಟದ ಜತೆಗೆ ಶಿಕ್ಷಣ ಕೂಡ ನೀಡುತ್ತೇವೆ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ್, ಸಿಆರ್‌ಪಿ ವಿಶ್ವನಾಥ್, ಮುಖ್ಯ ಶಿಕ್ಷಕ ಕೆ. ರವಿಕುಮಾರ್, ಶಿಕ್ಷಕರಾದ ಶೈಲಜ, ಮಂಜುನಾಥ್, ಶಿವೇಗೌಡ, ಅನಿಲ್‌ಕುಮಾರ್ ಇದ್ದರು.

ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ
ಟಿ. ನರಸೀಪುರ: ಟಿ.ನರಸೀಪುರ ತಾಲೂಕು ಕೊರಬಗೆರೆ- ಬಾವಲಿ ರಸ್ತೆ ರಾಜ್ಯ ಹೆದ್ದಾರಿ 33 (ಮಳವಳ್ಳಿ-ಮೈಸೂರು ರಸ್ತೆ) ಕಿ.ಮೀ. 154.77 ರಿಂದ ಕಿ.ಮೀ. 180.97 ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬನ್ನೂರು ಪಟ್ಟಣದ ಪರಿಮಿತಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ಆ.6ರ ಬೆಳಗ್ಗೆ 11ಕ್ಕೆ ಬನ್ನೂರಿನ ಫುಟ್‌ಬಾಲ್ ಮೈದಾನದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಸಹಕಾರ ಹಾಗೂ ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಜಿಪಂ ಅಧ್ಯಕ್ಷ ಡಾ. ಪುಷ್ಪಾವತಿ ಅಮರನಾಥ್, ಸಂಸದರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ಸಿ.ಎಸ್. ಪುಟ್ಟರಾಜು, ಶಾಸಕರಾದ ಕೆ. ವೆಂಕಟೇಶ್, ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ವಾಸು, ಎಂ.ಕೆ. ಸೋಮಶೇಖರ್, ಸಾ.ರಾ. ಮಹೇಶ್, ಎಚ್.ಪಿ. ಮಂಜುನಾಥ್, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್, ಗೋ. ಮಧುಸೂದನ್, ಸಂದೇಶ್ ನಾಗರಾಜು, ಮರಿತಿಬ್ಬೇಗೌಡ, ಆರ್. ಧರ್ಮಸೇನ ಹಾಗೂ ಇತರ ಗಣ್ಯರು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement