ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಲ್ಲ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ವಿಷನ್ 2035 ಯೋಜನೆ

Rashmi Kasaragodu
Updated On : 5 Aug 2014, 12:16 pm

ಕ.ಪ್ರ. ವಾರ್ತೆ, ಮೈಸೂರು, ಆ. 4
ದೇಶಾದ್ಯಂತ ಇರುವ ಎಲ್ಲಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದ ಮಾಹಿತಿ ದೂರದೃಷ್ಟಿ ಹಾಗೂ ನಿರ್ಧರಣಾ ಪರಿಷತ್ತು ತಾಂತ್ರಿಕ ವಿಷನ್- 2035 ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರಭಾತ್ ರಂಜನ್ ತಿಳಿಸಿದರು.
ಮೈಸೂರು ಜಿಲ್ಲಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘದಲ್ಲಿ ಮೈಸೂರು ಪ್ರಿಂಟರ್ಸ್ ಕ್ಲಸ್ಟರ್ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 20 ವರ್ಷಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ವಿಷನ್ 2035 ಸಿದ್ಧಪಡಿಸಲಾಗಿದ್ದು, ಸದ್ಯದಲ್ಲಿಯೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುವುದು. ಇದರಿಂದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಕ್ಷೇತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನ ದೊರಕಿದಂತೆ ಆಗುತ್ತದೆ ಎಂದರು.
ಎಂಎಸ್‌ಎಂಇ ಕೈಗಾರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತರಬೇತಿ ದೊರೆಯುವ ಜೊತೆಗೆ, ವಿದ್ಯಾರ್ಥಿಗಳೆ ಸಮಸ್ಯೆಗಳನ್ನು ಗುರಿತಿಸಿ, ನಿವಾರಣೋಪಾಯ ಕಂಡುಕೊಳ್ಳಲು ಸಹಾಯ ಆಗುತ್ತದೆ ಎಂದು  ಅವರು ಹೇಳಿದರು.
ಪರಿಷತ್ತು ಎಂಎಸ್‌ಎಂಇ ರಫ್ತು ಪ್ರಮಾಣ ಹೆಚ್ಚಿಸಲು, ಟೆಕ್ಸ್‌ಟೈಲ್ಸ್ ಉದ್ಯಮ, ಜೀವರಕ್ಷಕ ತೈಲ ಉದ್ಯಮಗಳಿಗೆ ತಾಂತ್ರಿಕ ಸಲಹೆ ನೀಡಲು ಉದ್ದೇಶಿಸಲಾಗಿದೆ. ಹುರುಳಿ ಕಾಯಿಗೆ ಬಹಳ ಬೇಡಿಕೆ ಇದೆ. ಅದರ ರಫ್ತು ಪ್ರಮಾಣ ಹೆಚ್ಚಿಸಲು ಉದ್ದೇಶಿಸಲಾಗಿದೆ. ಅಮೆರಿಕದಲ್ಲಿ ಈ ಹುರುಳಿ ಪೌಡರ್‌ಗೆ ಬಹಳ ಬೇಡಿಕೆ ಇದೆ. ಅಲ್ಲಿನ ತೈಲ ಉತ್ಪಾದನೆಯ ಕೈಗಾರಿಕೆಗಳಿಗೆ ಈ ಪೌಡರ್ ಬಳಸಲಾಗುತ್ತಿದೆ ಎಂದರು.
ವಿಜ್ಞಾನಿ ಸಂಜಯ್ ಸಿಂಗ್ ಮಾತನಾಡಿ, ಹಲವಾರು ತಂತ್ರಾಕ ಸಂಸ್ಥೆಗಳು ಶೈಕ್ಷಣಿಕ ಸಂಪರ್ಕ ಹೊಂದಿಲ್ಲ. ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚು ಒಳಗಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ದೇಶದಲ್ಲಿ ಒಟ್ಟು 21 ಪ್ರಿಂಟಿಂಗ್ ಕ್ಲಸ್ಟರ್‌ಗಳಿವೆ. ಅವುಗಳಿಗೆ ತಾಂತ್ರಿಕ ನೆರವು ನೀಡಬೇಕಾದ ಅಗತ್ಯ ಇದೆ ಎಂದರು.
ಟೈಫ್ಯಾಕ್‌ನ ರಾಹುಲ್ ಕುಮಾರ್, ಪ್ರೊ.ಜಿ. ದೇವಕುಮಾರ್, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement