ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೃಷಿ ವಸ್ತುಪ್ರದರ್ಶನಕ್ಕೆ ರೈತರಿಗೆ ಆಹ್ವಾನ

Rashmi Kasaragodu
Updated On : 5 Aug 2014, 12:16 pm

ಮೈಸೂರು: ಮೀಡಿಯಾ ಟುಡೇ ಸಮೂಹವು ಆ. 22 ರಿಂದ 24 ರವರೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಅಗ್ರಿಟೆಕ್ ಇಂಡಿಯಾ- 2014 ಎಂಬ ದೇಶದ ಅತಿದೊಡ್ಡ ಕೃಷಿ ವಸ್ತುಪ್ರದರ್ಶನವನ್ನು ಆಯೋಜಿಸಿದೆ.
ಕೃಷಿ ಮತ್ತು ಆಹಾರ ಕ್ಷೇತ್ರಗಳಿಗೆ ಸಂಪೂರ್ಣ ಮೀಸಲಾಗಿರುವ ಈ ಅಂತಾರಾಷ್ಟ್ರೀಯ ಪ್ರದರ್ಶನ ಮೇಳವು ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು, ಸಂಶೋಧನೆಗಳು ಮತ್ತು ಅತ್ಯುತ್ತಮ ಕೃಷಿ ಸಾಧನಗಳು ಮುಂತಾದ ಕೃಷಿ ಕೇಂದ್ರಿತ ಚಟುವಟಿಕೆಗಳನ್ನು ಒಂದೇ ಸೂರಿನಡಿ ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಈ ಪ್ರದರ್ಶನಲ್ಲಿ ಪಾಲ್ಗೊಳ್ಳುವಂತೆ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ರೈತರನ್ನು ಸಂಸ್ಥೆಯು ಆಹ್ವಾನಿಸಿದೆ. ಈ ವಸ್ತುಪ್ರದರ್ಶನದಲ್ಲಿ ಹಾಲೆಂಡ್, ಜರ್ಮನಿ, ಕೊಲಂಬಿಯಾ, ಇಟಲಿ, ಟರ್ಕಿ, ಚೀನಾ, ತೈವಾನ್, ಇಸ್ರೇಲ್ ಸೇರಿದಂತೆ ಒಟ್ಟು 8 ದೇಶಗಳು ಪಾಲ್ಗೊಳ್ಳಲಿವೆ. ಅಲ್ಲದೇ ಆ. 23 ರಂದು ಅಂತಾರಾಷ್ಟ್ರೀಯ ಕೃಷಿ ಉದ್ದಿಮೆ ಕಾಂಗ್ರೆಸ್ ಸಮಾವೇಶವನ್ನೂ ಏರ್ಪಡಿಸಿದ್ದು, ಮಾರುಕಟ್ಟೆ ಪರಿಹಾರೋಪಾಯಗಳು ಮುಂತಾದವುಗಳನ್ನು ಅರ್ಥೈಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಭಾಗವಹಿಸಲಿಚ್ಛಿಸುವವರು ಮೊ. 98861 95494 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement