ಸರ್ಕಾರಿ ನೌಕರರ ಸಮ್ಮೇಳನ: ಭೂಮಿಪೂಜೆ
ಮೈಸೂರು: ರಾಜ್ಯಮಟ್ಟದ ಸರ್ಕಾರಿ ನೌಕರರ ಸಮ್ಮೇಳನಕ್ಕೆ ನಿರ್ಮಿಸುತ್ತಿರುವ ಬೃಹತ್ ವೇದಿಕೆಗೆ ರಾಜ್ಯಾಧ್ಯಕ್ಷ ಎಲ್. ಬೈರಪ್ಪ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಮೈಸೂರು ವಿವಿ ಕುಲಪತಿ ಡಾ.ಕೆ.ಎಸ್. ರಂಗಪ್ಪ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಸಂಘದ ಗೌರವಾಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ, ಕಾರ್ಯದರ್ಶಿಗಳಾದ ಜವರೇಗೌಡ, ಮಂಜುನಾಥ್, ಸೋಮಶೇಖರ್, ಜಿಲ್ಲಾ ಸಂಘದ ಕಾರ್ಯದರ್ಶಿ ಡಾ.ಕೆ. ಶಂಕರೇಗೌಡ, ಖಜಾಂಚಿ ಡಾ. ಚುಂಚಯ್ಯ ಇದ್ದರು.