ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 6 Aug 2014, 1:08 am

ಕ.ಪ್ರ. ವಾರ್ತೆ, ಎಚ್.ಡಿ. ಕೋಟೆ, ಆ.5
ಬೆಳಗಾವಿ ಗಡಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ದ್ವೇಷ ಭಾವನೆ ಮೂಡಿಸಲು ಪ್ರಯತ್ನಿಸುತ್ತಿರುವ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿ, ಈ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಮೋದ್ ಆಗ್ರಹಿಸಿದರು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಖಂಡಿಸಿ ಪಟ್ಟಣದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕನ್ನಡ ನೆಲವಾದ ಯಳ್ಳೂರು ಗ್ರಾಮದಲ್ಲಿ ಎಂಇಎಸ್ನವರು ಮಹಾರಾಷ್ಟ್ರ ರಾಜ್ಯ ಎಂದು ನಾಮಫಲಕ ಹಾಕುವಾಗ ಜಿಲ್ಲಾಡಳಿತ ಮೌನವಾಗಿರುವುದನ್ನು ಖಂಡಿಸಿದರು. ಉಪ ತಹಸೀಲ್ದಾರ್ ಸಿ.ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಕನ್ನಡ ಸೇನೆ ಅಧ್ಯಕ್ಷ ಕುಮಾರ್, ಕಸಾಪ ಅಧ್ಯಕ್ಷ ಡಿ.ಆರ್.ಮಹೇಶ್, ಟೌನ್ ಅಧ್ಯಕ್ಷ ಸೈಯದ್ ರಫೀಕ್, ಸಿದ್ದರಾಜು, ವಿನೋದ್ಕುಮಾರ್, ಸಿ.ಜಿ. ವೆಂಕಟೇಶ್, ಆನಂದಶೆಟ್ಟಿ, ಇಮ್ರಾನ್ಖಾನ್, ಪ್ರೇಮ್ ಸಾಗರ್, ಪ್ರಸಾದ್, ಪರಶಿವ, ಉಮೇಶ, ಗಣೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement