7 ರಂದು 'ಹೈಕ್ಳು' ತಂಡದಿಂದ ಜಾನಪದ ಸಂಗೀತ ರಸಧಾರೆ
ಮೈಸೂರು: ಹೈಕ್ಳು ತಂಡದಿಂದ ಫೆ. 7ರ ಸಂಜೆ 7ಕ್ಕೆ ರಂಗಾಯಣದ ವನರಂಗದಲ್ಲಿ ಜಾನಪದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಕ್ಕ ಜಾನಪದ ಹಿನ್ನೆಲೆಯಿಂದ ಬಂದ ಗಾಯಕರು, ವಾದ್ಯದವರು ಒಟ್ಟುಗೂಡಿ ಕಟ್ಟಿಕೊಂಡ ತಂಡ ಹೈಕ್ಳು. ಇದರಲ್ಲಿ ಬಾಬಿ ಮೇಬೂ, ನಾಗೇಶ್ ಕಂದೇಗಾಲ, ದಿವ್ಯಾ, ಸಿಂಧೂರ, ಸುಬ್ರಹ್ಮಣ್ಯ ಮೈಸೂರು, ಪ್ರದೀಪ್ ಕಿಗ್ಗಾಲ, ಸುಮರಾಣಿ, ನೆಲ್ಸನ್, ವಿನಯ್, ಲೋಕೇಶ್, ವಿಕ್ರಂ ಭಾರದ್ವಾಜ್, ನಿಮಿಷಾ ರಂಗನಾಥ್, ತೇಜಸ್ವಿನಿ ಆಳ್ವಾರ್, ಸುನಿಲ್, ಮಂಜುನಾಥ್, ಮೂರ್ತಿ, ಶಂಕರ್, ಶಂಕರ್ ಮಾಣಿ, ಶಿವ ಈ ಕಾರ್ಯಕ್ರಮ ನಡೆಸಿಕೊಡುವರು ಎಂದು ಸಾರಥ್ಯ ವಹಿಸಿರುವ ಪ್ರಮೋದ್ ಸ್ಟಿಫನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಫೆ. 15ಕ್ಕೆ ಗೋಕರ್ಣದಲ್ಲಿ ಎರಡನೇ ಕಾರ್ಯಕ್ರಮ ಇದೆ. ರು. 50 ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಮೊ. 96112-13126 ಸಂಪರ್ಕಿಸಬಹುದು ಎಂದರು.