ಎಟಿಎಂ ಯಂತ್ರಕ್ಕೆ ಬೆಂಕಿ ಹಚ್ಚಿದ್ದ ಆರೋಪಿಗೆ ಸಜೆ
ಮೈಸೂರು: ಎಟಿಎಂ ಕೇಂದ್ರಕ್ಕೆ ಬೆಂಕಿ ಹಚ್ಚಿ ಅಪಾರ ನಷ್ಟವನ್ನುಂಟು ಮಾಡಿದ್ದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂರು ವರ್ಷ ಕಠಿಣ ಸಜೆ ಹಾಗೂ ರು.6 ಸಾವಿರ ದಂಡ ವಿಧಿಸಿದೆ. ನಜರ್ಬಾದ್ ನಿವಾಸಿ ಮಧುಸೂದನ್ ಶಿಕ್ಷೆಗೆ ಒಳಗಾದವನು. ಇಲ್ಲಿನ ಕೆನರಾಬ್ಯಾಂಕ್ಗೆ ಸೇರಿದ ಎಟಿಎಂ ಕೇಂದ್ರಕ್ಕೆ 2012ರ ಮಾ. 17 ರಂದು ನುಗ್ಗಿದ ಮಧುಸೂದನ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಅಸಭ್ಯ ವರ್ತನೆ: ವ್ಯಕ್ತಿ ಬಂಧನ: ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಟಗಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಮೇಟಗಳ್ಳಿ ಕಾಲೋನಿ ನಿವಾಸಿ ಶ್ರೀನಿವಾಸ್ ಬಂಧಿತ ಆರೋಪಿ. ವರಸೆಯಲ್ಲಿ ಚಿಕ್ಕಪ್ಪ ಆಗಬೇಕಾದ ಶ್ರೀನಿವಾಸ್, ಬಾಲಕಿಯನ್ನು ಮನೆಯ ಮೇಲೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದ ಎಂದು ಬಾಲಕಿ ಪೋಷಕರು ದೂರಿದ್ದಾರೆ.