ಜೆಎಸ್ಎಸ್ ಶಿಕ್ಷಣ ಸಂಸ್ಥೆಗೆ ಪರ್ಯಾಯ ಪಾರಿತೋಷಕ
ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಲಾತ್ಮಕ ಪ್ರದರ್ಶನ ನೀಡಿದ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯ ಪಾರಿತೋಷಕವನ್ನು ಶನಿವಾರ ನಡೆದ ಸಮಾರೋಪದಲ್ಲಿ ಗಣ್ಯರು ವಿತರಿಸಿದರು. ಕಾಲೇಜು ವಿಭಾಗದಲ್ಲಿ ಸರಸ್ವತಿಪುರಂನ ಜೆಎಸ್ಎಸ್ ನರ್ಸಿಂಗ್ ಕಾಲೇಜು, ಪದವಿಪೂರ್ವ ವಿಭಾಗದಲ್ಲಿ ಜೆಎಸ್ಎಸ್ ಪದವಿಪೂರ್ವ ಕಾಲೇಜು, ಗ್ರಾಮೀಣ ಪ್ರೌಢಶಾಲಾ ವಿಭಾಗದಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆ, ಪಬ್ಲಿಕ್ ಶಾಲಾ ವಿಭಾಗದಲ್ಲಿ ಮಾನಸಗಂಗೋತ್ರಿಯ ಎಸ್ಜೆಸಿಇ ಆವಣರದಲ್ಲಿನ ಜೆಎಸ್ಎಸ್ ಪಬ್ಲಿಕ್ ಶಾಲೆ, ನಗರ ಪ್ರೌಢಶಾಲಾ ವಿಭಾಗದಲ್ಲಿ ಮೇಟಗಳ್ಳಿಯ ಜೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರಾಥಮಿಕ ವಿಭಾಗದಲ್ಲಿ ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯ ಜೆಎಸ್ಎಸ್ ಪಬ್ಲಿಕ್ಶಾಲೆ ಪಾರಿತೋಷಕ ಪಡೆಯಿತು.